ನಗರದ ಕೆಲ ರಸ್ತೆಯಲ್ಲಿ ಪಂಚರ್ ಮಾಫಿಯಾ (Puncture Mafia) ಆರ್ಭಟ ಮತ್ತೆ ಆರಂಭವಾಗಿದ್ದು, ಈ ಬಗ್ಗೆ ವಾಹನ ಸವಾರರರೇ ವಿಡಿಯೋ ಮಾಡಿ (Bengaluru) ಸಾಕ್ಷಿ ಸಮೇತ ಸಾಬೀತು ಮಾಡಿದ್ದಾರೆ.

ರಸ್ತೆ ಮೇಲೆ ಸಣ್ಣ ಸಣ್ಣ ಮೊಳೆ
ಬೆಂಗಳೂರು ಹೊರವಲಯದ ಟಿ.ದಾಸರಹಳ್ಳಿಯ ನಾಗಸಂದ್ರದಿಂದ ಗೊರಗುಂಟೆ ಪಾಳ್ಯಕ್ಕೆ ಹೋಗುವ ರಸ್ತೆಯಲ್ಲಿ ಈ ಪಂಚರ್‌ ಮಾಫಿಯಾ ನಡೆಯುತ್ತಿದ್ದು, ನಿಜಕ್ಕೂ ಇದು ಆಘಾತಕಾರಿ ವಿಚಾರವಾಗಿದೆ.

ಗೊರಗುಂಟೆ ಪಾಳ್ಯದ ಮುಖ್ಯ ಸಿಗ್ನಲ್ ಇರುವ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಬೈಕ್‌ ಸವಾರನೊಬ್ಬ ಈ ಮಾಫಿಯಾವನ್ನ ಪತ್ತೆ ಹಚ್ಚಿದ್ದಾರೆ.

ಈ ಬೈಕ್‌ ಸವಾರನ ಬೈಕ್‌ ಪದೇ ಪದೇ ಪಂಚರ್‌ ಆಗುತ್ತಿತ್ತು. ಇದು ಬಹಳ ಆಶ್ಚರ್ಯ ಸೃಷ್ಟಿ ಮಾಡಿದೆ. ಆಗ ಇದಕ್ಕೆ ಕಾರಣ ಎಂದು ಹುಡುಕಿಕೊಂಡು ಹೋಗಿದ್ದಾರೆ. ಈ ಸಮಯದಲ್ಲಿ ಅವರಿಗೆ ದೊಡ್ಡ ಶಾಕ್‌ ಒಂದು ಕಾದಿತ್ತು. ಏಕೆಂದರೆ ರಸ್ತೆ ಮೇಲೆ ಸಣ್ಣ ಸಣ್ಣ ಮೊಳೆಗಳನ್ನ ಹಾಕಿರುವುದು ಪತ್ತೆಯಾಗಿದೆ.

ಹಿಂದೆಯೂ ವೈರಲ್‌ ಆಗಿದ್ದ ವಿಡಿಯೋ
ಈ ಹಿಂದೆ ಸಹ ಬೆಂಗಳೂರಿನಲ್ಲಿ ಪಂಚರ ಮಾಫಿಯಾ ಇರುವ ಬಗ್ಗೆ ದೊಡ್ಡ ಸುದ್ದಿ ಆಗಿತ್ತು. ರಾಜ್‌ಕುಮಾರ್‌ ಸಮಾಧಿಯಿಂದ ಗೊರಗುಂಟೆಪಾಳ್ಯಕ್ಕೆ ಬರುವ ರಸ್ತೆಯಲ್ಲಿ ಸಹ ಮೊಳೆಗಳನ್ನ ಹಾಕಿರುವ ವಿಚಾರವಾಗಿ ವಾಹನ ಸವಾರರೊಬ್ಬರು ವಿಡಿಯೋವೊಂದನ್ನ ಮಾಡಿ ಹಾಕಿದ್ದರು. ಅಲ್ಲದೇ ಈ ಬಗ್ಗೆ ಪೊಲೀಸರು ತನಿಖೆ ಮಾಡಿ ಆರೋಪಿಗಳನ್ನ ಪತ್ತೆ ಹಚ್ಚಬೇಕು ಎಂದು ಹೇಳಿದ್ದರು. ಇದೀಗ ಅದೇ ರೀತಿಯ ಪ್ರಕರಣ ವರದಿಯಾಗಿದ್ದು, ಪದೇ ಪದೇ ಇದೇ ರೀತಿ ಆದರೆ ಜನರಿಗೆ ಬಹಳ ಸಮಸ್ಯೆ ಆಗುತ್ತದೆ. ಹಾಗಾಗಿ ಪೊಲೀಸರು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ತನಿಖೆ ಮಾಡಿ ಕಿಡಿಗೇಡಿಗಳನ್ನ ಬಂಧಿಸಬೇಕು.

ಬೆಂಗಳೂರಲ್ಲಿ ಮುಗಿಯದ ರಸ್ತೆ ಗುಂಡಿ ರಗಳೆ, ದುರಸ್ತಿಯಾದ 48 ಗಂಟೆಯಲ್ಲೇ ಹಾಳಾಯ್ತು ರಸ್ತೆ
ರಾಜಧಾನಿ ಬೆಂಗಳೂರಿನ ಮರ್ಯಾದೆ ದಿನೇ ದಿನೇ ಸೋಶಿಯಲ್ ಮೀಡಿಯಾದಲ್ಲಿ ಹರಾಜಾಗುತ್ತಲೇ ಇದೆ. ನಗರದ ರಸ್ತೆ ಗುಂಡಿಗಳ ವಿಚಾರವಾಗಿ ಸಾರ್ವಜನಿಕರು ಕೂಡ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ್ರ ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿಗೆ ಸೇರ್ಪಡೆ ಎಂಬಂತೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ದುರಸ್ತಿ ಮಾಡಿದ್ದ ರಸ್ತೆಯೊಂದು ಕೇವಲ 48 ಗಂಟೆಗಳಲ್ಲಿ ಮತ್ತೆ ಹಾಳಾಗಿದೆ. ರಾಜ್ಯ ಸರ್ಕಾರ, ಡಿಸಿಎಂ ಡಿಕೆ ಶಿವಕುಮಾರ್ ಏನೇ ಡೆಡ್ ಲೈನ್ ನೀಡಿದ್ರೂ, ಬೆಂಗಳೂರಿನ ರಸ್ತೆ ದುರಸ್ತಿ ಮಾತ್ರ ಯಶಸ್ವಿಯಾಗಿಲ್ಲ.

ಸೆಪ್ಟೆಂಬರ್ 27 ರಂದು ಬೆಂಗಳೂರಿನ ಚನ್ನಸಂದ್ರ ಸರ್ಕಲ್ ಬಳಿಯ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು. ಆದರೆ ಕೇವಲ 48 ಗಂಟೆಗಳಲ್ಲಿಯೇ ಈ ರಸ್ತೆ ಮ್ಯಾಟರ್ ಕುಸಿತವಾಗಿತ್ತು. ಈ ಪರಿಸ್ಥಿತಿಯನ್ನು ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ತೇಪೆ ಹಾಕಿದ ರಸ್ತೆ ಮೇಲ್ಮೈ ಕುಸಿಯುತ್ತ ನೀರು ನಿಲ್ಲಲು ಸಹ ಶುರುವಾಗಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!