ಡಿವೈಎಫ್‌ಐ ನಾಯಕಿ ಯುವ ವಕೀಲೇ ರಂಜಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಸಿದಂತೆ ಓರ್ವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ತಿರುವಲ್ಲ ಮೂಲದ ಅನಿಲ್ ಕುಮಾರ್ ಎಂದು ಗುರುತಿಸಲಾಗಿದ್ದು, ಇಂದು ಬೆಳಿಗ್ಗೆ ತಿರುವನಂತಪುರಂನಲ್ಲಿ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಹೊರಿಸಲಾಗಿದೆ. ಬಂಧಿತ ಆರೋಪಿ ರಂಜಿತಾ ಅವರ ಸ್ನೇಹಿತ ಎಂದು ತಿಳಿದು ಬಂದಿದೆ.

ಡಿವೈಎಫ್‌ಐ ಮುಖಂಡೆಯಾಗಿರುವ ವಕೀಲೆ ರಂಜಿತಾ ಸೆಪ್ಟೆಂಬರ್ 30 ರಂದು ಕುಂಬಳೆಯಲ್ಲಿರುವ ತಮ್ಮ ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು, ರಂಜಿತ್ ಸಿಪಿಐ(ಎಂ) ಕುಂಬಳ ಸ್ಥಳೀಯ ಸಮಿತಿಯ ಸದಸ್ಯೆ, ಪ್ರಜಾಸತ್ತಾತ್ಮಕ ಮಹಿಳಾ ಸಂಘದ ಗ್ರಾಮ ಕಾರ್ಯದರ್ಶಿ ಮತ್ತು ಡಿವೈಎಫ್‌ಐ ಪ್ರಾದೇಶಿಕ ಅಧ್ಯಕ್ಷೆಯಾಗಿದ್ದರು. ರಂಜಿತಾ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಪ್ರಕರಣ ತನಿಖೆ ಮುಂದುವರೆಸಿದ ಪೊಲೀಸರು ರಂಜಿತಾ ಬಳಸುತ್ತಿದ್ದ ಮೊಬೈಲ್ ಪೊನ್ ನ್ನು ವಶಕ್ಕೆ ಪಡೆದಿದ್ದರು.

ಪೊಲೀಸರು ವಿವರವಾದ ತನಿಖೆಯನ್ನು ಮುಂದುವರೆಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖಾ ತಂಡವು ರಂಜಿತಾ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಹೇಳಿಕೆಗಳನ್ನು ಸಂಗ್ರಹಿಸುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!