ಮಂಗಳೂರು:ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ 412/2004, ಕಲಂ 143, 147, 148, 323, 427, 506, 149 ಐಪಿಸಿ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ ಅಲ್ತಾಪ್ (47), ತಂದೆ ಇಸ್ಮಾಯಿಲ್ @ ಮೊಹಮ್ಮದ್, ವಾಸ: ಕಸಬ ಬೆಂಗ್ರೆ, ಇಮ್ರಾನ್ ಮಂಜಿಲ್, ಮಂಗಳೂರು ತಾಲೂಕು, ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.

ಮಾನ್ಯ 2ನೇ ಸಿ.ಜೆ.ಎಂ ನ್ಯಾಯಾಲಯ, ಮಂಗಳೂರು, ಸಿ.ಸಿ ನಂಬ್ರ 12/2007 ಪ್ರಕರಣದಲ್ಲಿ ವಿಚಾರಣೆ ವೇಳೆ ಹಾಜರಾಗದ ಕಾರಣ ಆರೋಪಿ ವಿರುದ್ಧ LPC ಪ್ರಕರಣವೆಂದು ಪರಿಗಣಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ, ಉತ್ತರ ಪೊಲೀಸ್ ಠಾಣೆಯ ಎಎಸ್‌ಐ ಬಾಬು, ಪಿಸಿ 3264 ಗುರು ಬಿ.ಟಿ ಹಾಗೂ ಪಿಸಿ 311 ಸುನಿಲ್ ಕುಮಾರ್ ಎನ್ ಅವರ ತಂಡವು ಖಚಿತ ಮಾಹಿತಿಯ ಆಧಾರದ ಮೇಲೆ ಅ.5ರಂದು ಮಂಗಳೂರು ಬಂದರು ಪ್ರದೇಶದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!