
ಮಂಗಳೂರು: ನಗರದ ಲಾಲ್‌ಬಾಗ್ ಪ್ರದೇಶದ ಸಾಯಿಬೀನ್ ಕಾಂಪ್ಲೆಕ್ಸ್‌ನ “ಆಮಂತ್ರಣ” ಅಂಗಡಿಯಲ್ಲಿ ಅಕ್ರಮವಾಗಿ ಇ-ಸಿಗರೇಟ್ ಹಾಗೂ ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಬರ್ಕೆ ಪೊಲೀಸ್ ಠಾಣಾ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.
ಅಕ್ಟೋಬರ್ 6ರಂದು ಸಂಜೆ, ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ ಅವರ ನೇತೃತ್ವದಲ್ಲಿ ನಡೆಸಿದ ದಾಳಿಯಲ್ಲಿ, ಅಂಗಡಿಯಿಂದ ₹9,72,745/- ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ –
847 ಇ-ಸಿಗರೇಟ್‌ಗಳು (ಮೌಲ್ಯ ₹4,43,125)
412 ಬಾಕ್ಸ್ ಮತ್ತು 86 ಪ್ಯಾಕ್‌ಗಳ ಸ್ವದೇಶಿ-ವಿದೇಶಿ ಸಿಗರೇಟ್‌ಗಳು (ಮೌಲ್ಯ ₹5,09,120)
ಹುಕ್ಕಾ ಸೇವನೆಗೆ ಬಳಸುವ 25 ಸಾಧನಗಳು (ಮೌಲ್ಯ ₹20,500)
ಪೊಲೀಸರು ವಶಕ್ಕೆ ಪಡೆದ ವಸ್ತುಗಳನ್ನು ಯುವಕರಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಈ ಸಂಬಂಧವಾಗಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು –
1. ಸಂತೋಷ್ (32), ಗಣೇಶ್ ಕೋಡಿ ಹೌಸ್, ಬಂಟ್ವಾಳ
2. ಇಬ್ರಾಹಿಂ ಇರ್ಷಾದ್ (33), ಕುದ್ರೋಳಿ, ಮಂಗಳೂರು
3. ಶಿವು ದೇಶಕೋಡಿ, ಅಂಗಡಿಯ ಮಾಲಕ
ಇವರ ವಿರುದ್ಧ Prohibition of Electronic Cigarettes Act 2019 ಮತ್ತು COTPA (Amendment) Bill 2015 ಅಡಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರು ಈ ಕುರಿತು ಮಾಹಿತಿ ನೀಡಿದ್ದಾರೆ.






