ಮೈಸೂರಿನಲ್ಲಿ (Mysuru) ಗುಲ್ಬರ್ಗಾ (kalburgi) ಮೂಲದ ಬಾಲಕಿಯ (girl) ಶವ ಪತ್ತೆಯಾಗಿದ್ದು, ಸಾಂಸ್ಕೃತಿಕ ನಗರಿ ಬೆಚ್ಚಿಬಿದ್ದಿದೆ.ಹೊಟ್ಟೆಪಾಡಿಗಾಗಿ ಕುಟುಂಬ ಸದಸ್ಯರ ಜೊತೆ ಮೈಸೂರಿಗೆ ಬಂದಿದ್ದ ಬಾಲಕಿ ಶವವಾಗಿ ಪತ್ತೇಯಾಗಿದ್ದಾಳೆ.ಮೈಸೂರಿನ ವಸ್ತುಪ್ರದರ್ಶನದ ಹತ್ತಿರ ಶವ ಪತ್ತೆ ಸಿಕ್ಕಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಟ್ಟಿಗೆಗೂಡು ವ್ಯಾಪ್ತಿಯಲ್ಲಿರುವ ವಸ್ತುಪ್ರದರ್ಶನದ ಬಳಿ 9 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಮೊನ್ನೆ ಕೊಲೆಯಾದ ಗಿಲಿ ಗಿಲಿ ವೆಂಕಟೇಶ್ ಕೊಲೆಗೀಡಾದ ಘಟನಾ ಸ್ಥಳದಿಂದ ಕೂಗಳತೆ ದೂರದಲ್ಲಿ ಬಾಲಕಿಯ ಶವಪತ್ತೆಯಾಗಿದೆ.

ಅಪ್ರಾಪ್ತ ಬಾಲಕಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು,ದಸರಾ ಹಿನ್ನೆಲೆಯಲ್ಲಿ ಗೊಂಬೆ ಬಲೂನ್ ಆಟಿಕೆಗಳನ್ನು ಮಾರಾಟ ಮಾಡಲು ಕುಟುಂಬ ಸದಸ್ಯರ ಜೊತೆಯಲ್ಲಿ ಮೈಸೂರಿಗೆ ಬಾಲಕಿ ಬಂದಿದ್ದಳು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಇನ್ನು, ಮೈಸೂರಲ್ಲಿ ಗಿಲ್ಕಿ ವೆಂಕಿ ಕೊಲೆ ಕೇಸ್ ಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮರ್ಡರ್ ಗೆ ಸ್ಕೆಚ್ ಹಾಕಿದ ವೆಂಕಿ ಬೀದಿ ಹೆಣವಾದ ವಿಚಾರ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಭೀಕರ ಹತ್ಯೆಯ ಹಿಂದೆ ಸೇಡಿನ ಕಹಾನಿ ಇದೆ ಎಂಬುದು ಗೊತ್ತಾಗಿದೆ. ಅಸಲಿಗೆ ಕೊಲೆಗೆ ಸ್ಕೆಚ್ ಹಾಕಿದ್ದು ಮೃತ ಗಿಲಿಗಿಲಿ ವೆಂಕಟೇಶ್ ಅಂತ ಗೊತ್ತಾಗಿದ್ದು,ಕೊಲೆಗೆ ಸ್ಕೆಚ್ ಹಾಕಿ ಗಿಲಿಗಿಲಿ ವೆಂಕಟೇಶ್ ತಾನೇ ಹತ್ಯೆಯಾಗಿದ್ದಾನೆ. ಈತ ರೌಡಿಶೀಟರ್ ಮಲ್ಲಿಕಾರ್ಜುನ್ ಆಲಿಯಾಸ್ ಹಾಲಪ್ಪನಿಗೆ ಮುಹೂರ್ತ ಇಟ್ಟಿದ್ದನು ಎಂದು ಗೊತ್ತಾಗಿದೆ.

ಗಿಲಿಗಿಲಿ ವೆಂಕಟೇಶ್ ಹಾಗೂ ಶಿಷ್ಯಂದಿರು ವಾರದ ಹಿಂದಷ್ಟೇ ಹಾಲಪ್ಪನ ಸ್ನೇಹಿತ ಮಂಜುನಾಥ್ ಮನೆ ಮುಂದೆ ಹಾಲಪ್ಪ ಎಲ್ಲಿ ಅಂತಾ ಜಗಳವಾಡಿದ್ದರು. ಈ ಸಂಬಂಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಗಿಲಿಗಿಲಿ ವೆಂಕಟೇಶ್ ಗ್ಯಾಂಗ್ ಹಾಕಿದ್ದ ಸ್ಕೆಚ್ ಗೆ ಹಾಲಪ್ಪ ಬೆಚ್ಚಿಬಿದ್ದಿದ್ದರು.
ಹೀಗಾಗಿ ಹಾಲಪ್ಪ ಅಂಡ್ ಟೀಂ ನಿಂದ ಸ್ಕೇಚ್ ಹಾಕಲಾಗಿತ್ತು. ಮಂಗಳವಾರ ಹಾಡಹಗಲೇ ರಸ್ತೆಯಲ್ಲಿ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಐದು ತಿಂಗಳ ಹಿಂದೆ ಕೊಲೆಯಾಗಿದ್ದ ರೌಡಿ ಶೀಟರ್ ಕ್ಯಾತಮಾರನಹಳ್ಳಿ ಕಾರ್ತಿಕ್ ಸಾವಿಗೂ ಮೊದಲೇ ಅನೇಕರ ಜತೆ ಗಿಲಿ ಗಿಲಿ ವೆಂಕಟೇಶ್ ಮನಸ್ತಾಪ ಹೊಂದಿದ್ದರು. ಗಿಲಿ ಗಿಲಿ ವೆಂಕಟೇಶ್ ಮೃತ ಕಾರ್ತಿಕ್ ನ ಮಾಜಿ ಗುರು ಎಂದು ಗೊತ್ತಾಗಿದ್ದು,ಕಾರ್ತಿಕ್ ಹತ್ಯೆಯಾದ ಬಳಿಕ ಪಾರುಪತ್ಯ ಸಾಧಿಸಲು ವೆಂಕಟೇಶ್ ಪ್ಲಾನ್ ಮಾಡಿಕೊಂಡಿದ್ದನು. ಬಳಿಕ ಕಾರ್ತಿಕ್ ಗ್ಯಾಂಗ್, ಗಿಲಿಗಿಲಿ ವೆಂಕಟೇಶ್ ಗ್ಯಾಂಗ್ ನಡುವೆ ಗಲಾಟೆ ಆಗಿತ್ತು.ಕೊಲೆಗೆ ಮೃತ ರೌಡಿಶೀಟರ್ ಕಾರ್ತಿಕ್ ಗ್ಯಾಂಗ್ ನ ಮಲ್ಲಿಕಾರ್ಜುನ್ ಆಲಿಯಾಸ್ ಹಾಲಪ್ಪ, ಬಿಗ್ ಮನೋಜ್ ಆಲಿಯಾಸ್ ಬಿಗ್ ಶೋ ಪ್ಲಾನ್ ಮಾಡಿ ಹೊಡೆದು ಹಾಕಿದ್ದಾರೆ.ಕೊಲೆಯಾದ ಬಳಿಕ ಹಾಲಪ್ಪ ಅಂಡ್ ಬಿಗ್ ಶೋ ಎಸ್ಕೇಪ್ ಆಗಿದ್ದರು. ಮಂಗಳವಾರ ತಡರಾತ್ರಿ ಪೊಲೀಸರ ಮುಂದೆ 5 ಮಂದಿ ಹಂತಕರು ಶರಣಾಗಿದ್ದಾರೆ.ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!