ಬಂಟ್ವಾಳ:ತಾಲೂಕು ಪಂಚಾಯತ್ ಬಂಟ್ವಾಳದ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್ (45) ಅವರ ದೂರು ಆಧರಿಸಿ, ಮಾಜಿ ಸದಸ್ಯ ಪ್ರಭಾಕರ್ ಪ್ರಭು ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಪ್ರಭಾಕರ್ ಪ್ರಭು ಅವರು “ತಾಲೂಕು ಪಂಚಾಯತ್ ಬಂಟ್ವಾಳ” ಎಂಬ ಅಧಿಕೃತ ಲೆಟರ್‌ಹೆಡ್ ಬಳಸಿಕೊಂಡು, ಅಧಿಕಾರವಿಲ್ಲದಿದ್ದರೂ ಸಹ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಒತ್ತಡ ಹೇರುವ ಉದ್ದೇಶದಿಂದ ಸುಳ್ಳು ಮಾಹಿತಿಯೊಂದಿಗೆ ಪತ್ರ ಬರೆದಿರುವುದು ಪತ್ತೆಯಾಗಿದೆ.

ಈ ಪತ್ರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ವಾಟ್ಸಾಪ್‌ಗೆ ಕಳುಹಿಸಿದಾಗ ವಿಷಯ ಬಯಲಾಗಿದ್ದು, ಸಾರ್ವಜನಿಕರನ್ನು ದಾರಿ ತಪ್ಪಿಸಲು ಹಾಗೂ ಸರ್ಕಾರಿ ಇಲಾಖೆಗೆ ಗೊಂದಲ ಉಂಟುಮಾಡುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ.147/2025, ಕಲಂ 319(2), 336(2) BNS ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!