ಕಂಟೆಂಟ್ ಕ್ರಿಯೇಟರ್ ಹಾಗೂ ನಟ ಅಖಿಲ್ ಎನ್‌ಆರ್‌ಡಿ ಅವರ ಪತ್ನಿ ಬಸ್ ಕಂಡಕ್ಟರ್ ಜೊತೆ ತೆರಳಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಅಖಿಲ್ ಅವರ ಆಪ್ತ ಸ್ನೇಹಿತ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಸಾಯಿ ಕೃಷ್ಣ ಮಾತನಾಡಿದ್ದು, ಘಟನೆ ನಿಜವೆಂದು ಹೇಳಿದ್ದಾರೆ.ಅಖಿಲ್-ಮೇಘ ವಿವಾಹಕ್ಕೆ ತಾನೂ ತೆರಳಿದ್ದೆ. ಈ ಸುದ್ದಿ ತಮಗೆ ಆಘಾತವನ್ನುಂಟು ಮಾಡಿದೆ ಎಂದು ಸಾಯಿ ಕೃಷ್ಣ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ. ಮೇಘ ನೈಟಿ ಧರಿಸಿಕೊಂಡೇ ಲಗೇಜ್ ಹಿಡಿದು ಮನೆಯಿಂದ ತೆರಳಿದ್ದಾರೆ ಎನ್ನಲಾಗಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ಈ ನಡುವೆ ಅಖಿಲ್ ಅವರ ವೈಯಕ್ತಿಕ ಜೀವನದ ಕುರಿತು ಹಲವು ಆರೋಪ-ಪ್ರತ್ಯಾರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಅಖಿಲ್‌ಗೆ ಬೇರೆ ಸಂಬಂಧಗಳಿದ್ದವು ಎಂಬ ಕಾಮೆಂಟ್‌ಗಳೂ ಕಾಣಿಸಿಕೊಂಡಿವೆ. ಆದರೆ ಈ ಆರೋಪಗಳಿಗೆ ಯಾವುದೇ ದೃಢೀಕರಣವಿಲ್ಲ.ಪತ್ನಿಯ ನಿರ್ಧಾರದ ಬಗ್ಗೆ ಅಖಿಲ್ ಯಾರನ್ನೂ ದೂಷಿಸುವುದಿಲ್ಲ ಎಂದು ಸಾಯಿ ಕೃಷ್ಣ ತಿಳಿಸಿದ್ದಾರೆ ಎನ್ನಲಾಗಿದೆ. “ಮಾತನಾಡುವವರು ಮಾತನಾಡಲಿ. ಅವಳಿಗೆ ಏನನ್ನೂ ಹೇಳಬೇಡಿ. ಅವಳು ಮಾಡಬೇಕಾದ್ದನ್ನು ಮಾಡಿದ್ದಾಳೆ. ಮೂವ್ ಆನ್ ಆಗಬೇಕು” ಎಂದು ಅಖಿಲ್ ಹೇಳಿದ್ದಾರೆ ಎಂದು ಸಾಯಿ ಕೃಷ್ಣ ತಿಳಿಸಿದ್ದಾರೆ.ಈ ಕುರಿತು ಮನೋರಮಾ ಆನ್‌ಲೈನ್ ವರದಿ ಮಾಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!