
ಬಂಟ್ವಾಳ:ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದ ಕಲಾಯಿ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಭರತ್ ಕುಮ್ಡೇಲ್ (ಬಂಟ್ವಾಳ ತಾಲೂಕು) ಕೊನೆಗೂ ಕಾನೂನಿನ ಕೈಗೆ ಸಿಕ್ಕಿದ್ದಾನೆ.
ಮಾಮಲೆ ನಂ. 169/2017 (U/s 143, 147, 148, 447, 448, 302, 120(B), 201, 149 IPC) ಅಡಿಯಲ್ಲಿ ಭರತ್ ಕುಮ್ಡೇಲ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಲವು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಆತ ಅಕ್ಟೋಬರ್ 10, 2025 ರಂದು ಮಂಗಳೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸ್ವಯಂ ಹಾಜರಾಗಿದ್ದಾನೆ.
ನ್ಯಾಯಾಲಯವು ಆರೋಪಿಗೆ ಅಕ್ಟೋಬರ್ 25, 2025 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ಇದೇ ವೇಳೆ, ಭರತ್ ಕುಮ್ಡೇಲ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 54/2025 ಅಡಿಯಲ್ಲಿ ಕಲಂ 103, 109, 118(1), 190, 191(1), 118(2), 191(2), 191(3) ಬಿಎನ್‌ಎಸ್ ಪ್ರಕಾರ ಹೊಸ ಪ್ರಕರಣವೂ ದಾಖಲಾಗಿದೆ.
ಭರತ್ ಕುಮ್ಡೇಲ್ ವಿರುದ್ಧ ಬಂಟ್ವಾಳ ಹಾಗೂ ಸುತ್ತಮುತ್ತಲಿನ ಠಾಣೆಗಳಲ್ಲಿ ಒಟ್ಟು 15 ಗಂಭೀರ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ, ಅಶಾಂತಿ ಸೃಷ್ಟಿ ಹಾಗೂ ಎಸ್ಸಿ/ಎಸ್ಟಿ ಅಕ್ರಮ ಕಾಯ್ದೆಯಡಿಗಿನ ಆರೋಪಗಳೂ ಸೇರಿವೆ.
ದಾಖಲಾಗಿರುವ ಪ್ರಮುಖ ಪ್ರಕರಣಗಳ ಪಟ್ಟಿ:
1️⃣ ಬಂಟ್ವಾಳ ನಗರ ಠಾಣೆ ಅ.ಕ್ರ 169/2017 – ಕೊಲೆ ಪ್ರಕರಣ
2️⃣ ಬಂಟ್ವಾಳ ಗ್ರಾಮಾಂತರ ಠಾಣೆ ಅ.ಕ್ರ 121/2006 – ಹಲ್ಲೆ ಪ್ರಕರಣ
3️⃣ ಅ.ಕ್ರ 184/2007 – ಗಲಭೆ, ಹಲ್ಲೆ
4️⃣ ಅ.ಕ್ರ 79/2009 – ಅಕ್ರಮ ಗುಂಪು ಹಾಗೂ ಹಲ್ಲೆ
5️⃣ ಅ.ಕ್ರ 154/2010 – ಕೆಪಿಡಿಎಲ್‌ಪಿ ಕಾಯ್ದೆಯ ಅಡಿಯಲ್ಲಿ ಪ್ರಕರಣ
6️⃣ ಅ.ಕ್ರ 245/2011 – ದೌರ್ಜನ್ಯ, ಹಲ್ಲೆ
7️⃣ ಅ.ಕ್ರ 157/2012 – ಹಲ್ಲೆ ಮತ್ತು ಬೆದರಿಕೆ
8️⃣ ಅ.ಕ್ರ 54/2013 – ಹಲ್ಲೆ ಮತ್ತು ಪ್ರಚೋದನೆ
9️⃣ ಅ.ಕ್ರ 126/2012 – ಕೊಲೆ ಯತ್ನ
🔟 ಅ.ಕ್ರ 240/2015 –






