ಮಂಗಳೂರು:ಕೇಂದ್ರ ಸರ್ಕಾರದಿಂದ ನಿಷೇಧಕ್ಕೊಳಗಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ಒಬ್ಬರನ್ನು ಬಂಧಿಸಿ, ಅವರ ವಿರುದ್ಧ ಯುಎಪಿಎ ಕಾಯ್ದೆಯಡಿ (UAPA Act) ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ವರದಿಯ ಪ್ರಕಾರ, 2022ರ ಸೆಪ್ಟೆಂಬರ್ 28ರಂದು PFI ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆಯಾಗಿ ಘೋಷಿಸಲಾಗಿತ್ತು. ಈ ಹಿನ್ನೆಲೆ, 2025ರ ಅಕ್ಟೋಬರ್ 9ರಂದು ಆರೋಪಿ ಸೈಯ್ಯದ್ ಇಬ್ರಾಹಿಂ ತಂಙಳ್ (55), ವಾಸ: ರಾಮಕುಂಜ ಗ್ರಾಮ, ಉಪ್ಪಿನಗಂಡಿ, ದಕ್ಷಿಣ ಕನ್ನಡ ಜಿಲ್ಲೆ, ವಾಟ್ಸ್‌ಆಪ್ ಗ್ರೂಪ್‌ನಲ್ಲಿ ನಿಷೇಧಿತ ಸಂಘಟನೆಯ ಪರವಾಗಿ ಪೋಸ್ಟ್ ಪ್ರಕಟಿಸಿ, ಆ ಸಂಘಟನೆಯ ಪ್ರಚಾರ ನಡೆಸಿ, ಸಮಾಜದಲ್ಲಿ ಆತಂಕ ಉಂಟು ಮಾಡುವ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ದೊರೆತಿದೆ.

ಈ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.113/2025 U/s 10(a)(i), 13, 18 UAPA Act ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಆರೋಪಿ ಸೈಯ್ಯದ್ ಇಬ್ರಾಹಿಂ ತಂಙಳ್ ಅವರನ್ನು ಅಕ್ಟೋಬರ್ 9ರಂದು ಮಂಗಳೂರು ನಗರದ ಉರ್ವಾ ಸ್ಟೋರ್ ಬಳಿ ಬಂಧಿಸಲಾಗಿದ್ದು, ಅವರ ವಶದಲ್ಲಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆ ಮುಂದುವರಿದಿದೆ.

ಬಂಧನದ ನಂತರ ಆರೋಪಿಯನ್ನು ಅಕ್ಟೋಬರ್ 10ರಂದು ಮಾನ್ಯ 49ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (CCH-50) ಹಾಗೂ ಎನ್‌ಐಎ ವಿಶೇಷ ನ್ಯಾಯಾಲಯ, ಬೆಂಗಳೂರು ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ಅಕ್ಟೋಬರ್ 24ರವರೆಗೆ ನ್ಯಾಯಾಂಗ ವಶಕ್ಕೆ ನೀಡಿದೆ.

ಆರೋಪಿಯ ವಿವರ:
ಹೆಸರು: ಸೈಯ್ಯದ್ ಇಬ್ರಾಹಿಂ ತಂಙಳ್
ವಯಸ್ಸು: 55 ವರ್ಷ
ತಂದೆ: ದಿವಂಗತ ಸೈಯ್ಯದ್ ಹಸನ್ ತಂಙಳ್
ವಾಸ: ಬೀಜಾತಳಿ ಹೌಸ್, ರಾಮಕುಂಜ ಗ್ರಾಮ, ಉಪ್ಪಿನಗಂಡಿ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

Leave a Reply

Your email address will not be published. Required fields are marked *

Join WhatsApp Group
error: Content is protected !!