ಸುಳ್ಯ: ಸುಳ್ಯ ತಾಲೂಕಿನ ಗಾಂಧಿನಗರದ ನಿವಾಸಿ ಚಾಂದಿನಿ (ವಯಸ್ಸು 28), ತೀರಾ ವಿರಳವಾದ Hyper IGE Mediated Mast Cell Activation Syndrome ಎಂಬ ಕಾಯಿಲೆಯಿಂದ ಹಲವು ವರ್ಷಗಳಿಂದ ಹೋರಾಡುತ್ತಿದ್ದು, ಕೊನೆಗೂ ಸಾವನ್ನಪ್ಪಿದ್ದಾರೆ.

ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಚಾಂದಿನಿ, ಹಲವು ವರ್ಷಗಳಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಪ್ರಾರಂಭದಲ್ಲಿ ಕಾಯಿಲೆಯ ನಿಖರ ಕಾರಣ ಪತ್ತೆಯಾಗದೇ, ಸುಳ್ಯ ಮತ್ತು ಮಂಗಳೂರು ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಕೂಡ, ಅವರ ಸ್ಥಿತಿ ಸುಧಾರಿಸಲಿಲ್ಲ.

ನಂತರ ಆರೋಗ್ಯ ಇಲಾಖೆಯ ತನಿಖೆ ಬಳಿಕ, ಚಾಂದಿನಿ ಅವರಿಗೆ ಅತಿವಿರಳವಾದ Hyper IGE Mediated Mast Cell Activation Syndrome ಎನ್ನುವ ಕಾಯಿಲೆ ಇರುವುದಾಗಿ ಪತ್ತೆಯಾಯಿತು. ಈ ಕಾಯಿಲೆಗೆ ಜಿಲ್ಲಾ ಮಟ್ಟದಲ್ಲಿ ಚಿಕಿತ್ಸೆ ಸೌಲಭ್ಯ ಇರದ ಕಾರಣ, ಅವರನ್ನು ಹೈದರಾಬಾದ್‌ನ AIG ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಕಾಯಿಲೆಯನ್ನು ದೃಢಪಡಿಸಿದ ಬಳಿಕ, ಚಾಂದಿನಿ ಅವರು ಅದರ ಕುರಿತು ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ್ದರು.

ಈ ಕಾಯಿಲೆಯ ಲಕ್ಷಣಗಳು:
Hyper IgE Mediated Mast Cell Activation Syndrome ಒಂದು ಅಪರೂಪದ ರೋಗವಾಗಿದ್ದು, ದೇಹದ ರಕ್ಷಣಾ ವ್ಯವಸ್ಥೆಯ ಅತಿಯಾಗಿ ಪ್ರತಿಕ್ರಿಯಿಸುವ ಸ್ಥಿತಿ. ಈ ಕಾಯಿಲೆಯಿಂದ ಬಳಲುವವರಲ್ಲಿ —

  • ಚರ್ಮ ಕೆಂಪಾಗುವುದು ಮತ್ತು ಉರಿಯೂತ,
  • ಉಸಿರಾಟದ ತೊಂದರೆ,
  • ಜೀರ್ಣಾಂಗದ ಸಮಸ್ಯೆ (ಮಲಬದ್ಧತೆ, ಹೊಟ್ಟೆ ನೋವು),
  • ನರಸಂಬಂಧಿತ ತೊಂದರೆ,
  • ಹಲ್ಲು ಸಮಸ್ಯೆ,
  • ‘ಬ್ರೇನ್ ಫಾಗ್’ (ಸ್ಮರಣಶಕ್ತಿ ಕುಗ್ಗುವುದು) ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

Leave a Reply

Your email address will not be published. Required fields are marked *

Join WhatsApp Group
error: Content is protected !!