
ಪುತ್ತೂರು: ಬಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗೆ ತಂತ್ರಜ್ಞಾನ ಆಧಾರಿತ ಸುಗಮ ಸೇವೆ ನೀಡುವ ಉದ್ದೇಶದಿಂದ “ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್” ಶೀರ್ಷಿಕೆಯ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ. ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್ ಎರಡಲ್ಲೂ ಲಭ್ಯವಿರುವ ಈ ಆ್ಯಪ್ ಗ್ರಾಹಕ ಸ್ನೇಹಿ లక్షಣಗಳಿಂದ ಕೂಡಿದೆ.
ಗ್ರಾಹಕರು ತಮ್ಮ ಆಭರಣ ಯೋಜನೆಗಳ ಮಾಹಿತಿಯನ್ನು ನಿರ್ವಹಿಸುವುದು, ಆರ್ಡರ್ ಸ್ಥಿತಿ ಪರಿಶೀಲಿಸುವುದು, ಡಿಜಿಟಲ್ ಪಾಸ್‌ಬುಕ್, ಪಾವತಿ ವಿವರಗಳು, ದಿನನಿತ್ಯದ ಚಿನ್ನ ಬೆಲೆ, ಬೆಳ್ಳಿ ಬೆಲೆ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ನೆರವಿಗೊಳ್ಳಬಹುದು. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಸ್ಟ್ರೀಮ್ ಪೇಮೆಂಟ್ ಮೂಲಕ ಮನೆಬಾಗಿಲಲ್ಲಿ ಕುಳಿತುಕೊಂಡೇ ಪಾವತಿ ಮಾಡಿಕೊಳ್ಳುವ ಹಾಗೂ ಕೂಡಲೇ ರಶೀದಿ ಪಡೆಯುವ ಸೌಲಭ್ಯವೂ ದೊರೆಯಲಿದೆ.
ಈ ಅಪ್ಲಿಕೇಶನ್ ಸಮಾಜಿಕ ಜಾಲತಾಣಗಳೊಂದಿಗೆ ಸಂವಹನ ಕಲ್ಪಿಸುವ ಮೂಲಕ ನೂತನ ಆಭರಣ ವಿನ್ಯಾಸಗಳು ಹಾಗೂ ಇತರ ಅಪ್‌ಡೇಟ್ಸ್‌ಗಳನ್ನು ಗ್ರಾಹಕರಿಗೆ ತಲುಪಿಸುತ್ತದೆ. 24 ಕ್ಯಾರೆಟ್, 22 ಕ್ಯಾರೆಟ್ ಚಿನ್ನದ ಬೆಲೆ ಹಾಗೂ ಹೂಡಿಕೆ ಚಿನ್ನದ ತೂಕ, ಬೆಲೆ, ದಿನಾಂಕ ಸೇರಿದಂತೆ ಎಲ್ಲಾ ಸವಿವರಗಳನ್ನು ಪಾರದರ್ಶಕವಾಗಿ ವೀಕ್ಷಿಸಬಹುದು.
ಶಂಕರ್ ಗ್ರೂಪ್ ಆಫ್ ಕಂಪೆನಿಯ ಚೇರ್‌ಮನ್ ಸತ್ಯ ಶಂಕರ್ ಆ್ಯಪ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಂಕರ್ ಗ್ರೂಪ್ ಇ.ಡಿ. ರಂಜಿತ್ ಶಂಕರ್, ಡೈರೆಕ್ಟರ್ ಮನಸ್ವಿತ್, ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮುಖ್ಯಸ್ಥರಾದ ಬಲರಾಮ ಆಚಾರ್ಯ, ರಾಜೇಶ್ವರಿ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ್ ಬಿ.ಆಚಾರ್ಯ, ವೇದ ಲಕ್ಷ್ಮೀಕಾಂತ್, ಸುದನ್ವ ಬಿ. ಆಚಾರ್ಯ, ಅರುಂದತಿ ಆಚಾರ್ಯ, ಶ್ರೀರಾಮ್ ಆಚಾರ್ಯ, ರಕ್ಷಿತ್ ರಾವ್, ನರೇಶ್, ಶೋರೂಂ ಮ್ಯಾನೇಜರ್ ಶೇಖರ್, ಪುರಂದರ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಸೇರಿದಂತೆ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






