ಮಂಗಳೂರು, ನ.5: ಬೈಕಂಪಾಡಿ ಪ್ರದೇಶದಲ್ಲಿ ಅಪ್ರಾಪ್ತ ಬಾಲಕನಿಗೆ ಮೋಟಾರ್‌ಸೈಕಲ್‌ ಚಲಾಯಿಸಲು ನೀಡಿದ ಪ್ರಕರಣದಲ್ಲಿ ವಾಹನದ ಮಾಲೀಕರಿಗೆ ನ್ಯಾಯಾಲಯದಿಂದ ದಂಡ ವಿಧಿಸಲಾಗಿದೆ.

ದಿನಾಂಕ 10.10.2025 ರಂದು ಬೈಕಂಪಾಡಿಯಲ್ಲಿ KA19 HR 4112 ಸಂಖ್ಯೆ ಹೊಂದಿರುವ ವಾಹನದ ಮಾಲೀಕರಾದ ಶ್ರೀಮತಿ ಹತಿಜಮ್ಮ ಅವರು ತಮ್ಮ ಅಪ್ರಾಪ್ತ ಮಗನಿಗೆ ಮೋಟಾರ್‌ಸೈಕಲ್‌ ಚಲಾಯಿಸಲು ನೀಡಿದ್ದರು. ಈ ಘಟನೆ ಕುರಿತು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣ ವಿಚಾರಣೆಗೊಳಪಟ್ಟ ಮಾನ್ಯ 4ನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಮಂಗಳೂರು ರವರು, ಇಂದು ದಿನಾಂಕ 05.11.2025 ರಂದು ತೀರ್ಪು ನೀಡಿದ್ದು, ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಹಿನ್ನೆಲೆಯಲ್ಲಿ ವಾಹನದ ಮಾಲೀಕರಾದ ಹತಿಜಮ್ಮ ಅವರಿಗೆ ₹26,000/- ದಂಡ ವಿಧಿಸಿ ಆದೇಶಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪೊಲೀಸರು ಸಾರ್ವಜನಿಕರಿಗೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!