
ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆಯ ಮಾನೈ ಆರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ಮಹಮ್ಮದ್ thamzeer, ಏರ್ ಇಂಡಿಯಾ SATS (AISATS) ನಲ್ಲಿ ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಆಯ್ಕೆಯಾಗಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇಮಕಗೊಂಡಿದ್ದಾರೆ.
ಏವಿಯೇಶನ್ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಯಾದ AISATS ನಲ್ಲಿ ಉದ್ಯೋಗ ಪಡೆಯುವುದು, ಕಾಲೇಜಿನ ಗುಣಮಟ್ಟದ ಶಿಕ್ಷಣ, ವೃತ್ತಿಪರ ತರಬೇತಿ ಮತ್ತು ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಈ ಸಾಧನೆಗಾಗಿ ಆಯ್ಕೆಯಾದ ವಿದ್ಯಾರ್ಥಿಗೆ ಹಾಗೂ ತರಬೇತುದಾರರಿಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಉಪನ್ಯಾಸಕರಿಂದ ಅಭಿನಂದನೆ ಸಲ್ಲಿಸಲಾಯಿತು.
ಒಂದು ವರ್ಷದಲ್ಲಿ ಮತ್ತೊಂದು ಮೈಲಿಗಲ್ಲು
2024ರ ಅಕ್ಟೋಬರ್ 3ರಂದು ಅಧಿಕೃತವಾಗಿ ಆರಂಭಗೊಂಡ ಶ್ರೀ ಪ್ರಗತಿ ವಿಸ್ತಾರ ಕಾಲೇಜು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೆಲವೇ ಕ್ಷೇತ್ರಗಳತ್ತ ಹೆಚ್ಚು ಒಲವು ತೋರುತ್ತಿರುವ ಸಮಯದಲ್ಲಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಏವಿಯೇಶನ್ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವ ಸದುದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.
ಅನುಭವೀ ತರಬೇತುದಾರರಿಂದ ಮಾರ್ಗದರ್ಶನ
ಪ್ರಸ್ತುತ ಕಾಲೇಜಿನಲ್ಲಿ:
✅ ಎರಡು ಡಿಪ್ಲೋಮ ಬ್ಯಾಚ್‌ಗಳು
✅ BBA in Aviation ಪದವಿ ತರಗತಿಗಳು
ಅನುಭವಿ ತರಬೇತುದಾರರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ.
ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವವರು:
✈ ಬಿಂದು ಸಾಗರ್ ಶೆಟ್ಟಿ – ದೆಹಲಿ ಹಾಗೂ ಮುಂಬೈ ವಿಮಾನ ನಿಲ್ದಾಣದಲ್ಲಿ Cabin Crew ಆಗಿ 17 ವರ್ಷಗಳ ಅನುಭವ
✈ ಚೈತನ್ಯ – ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ Air India SATS ನ Ground Handling ಅನುಭವ
✈ ಅಶ್ವಿತಾ ರೈ – ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ Air India SATS Ground Handling ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ
ಹೊಸ ಬ್ಯಾಚ್‌ಗಳಿಗೆ ಪ್ರವೇಶ ಆರಂಭ
ಕಾಲೇಜಿನಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ ಆರಂಭಗೊಳ್ಳಲಿರುವ ಹೊಸ ಡಿಪ್ಲೋಮ ಬ್ಯಾಚ್‌ಗಳಿಗೆ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಸಂಸ್ಥೆಯು ಪ್ರಕಟಿಸಿದೆ.






