
ಮನೆಯವರ ವಿರೋಧದ ನಡುವೆಯೂ ಯುವತಿಯರಿಬ್ಬರು ಪರಸ್ಪರ ಪ್ರೀತಿಸಿ ಆಗಿರುವ ವಿವಾಹ ಅಪರೂಪದ ಘಟನೆ ಪಶ್ಚಿಮ ಬಂಗಾಳದ ಸುಂದರ್ಬನ್ಸ್ ನಡೆದಿದೆ.
19 ವರ್ಷದ ರಿಯಾ ಸರ್ದಾರ್ ಮತ್ತು 20 ವರ್ಷದ ರಾಖಿ ನಾಸ್ಕರ್ ಇಬ್ಬರ ವಿವಾಹ ಸ್ಥಳೀಯ ದೇವಸ್ಥಾನವೊಂದರಲ್ಲಿ ನಡೆದಿದೆ.
ಡ್ಯಾನ್ಸರ್ಸ್ ಆಗಿರುವ ರಿಯಾ – ರಾಖಿ ಎರಡು ವರ್ಷದ ಹಿಂದೆ ಮೊದಲ ಬಾರಿಗೆ ಭೇಟಿ ಆಗಿದ್ದರು. ಆ ದಿನದಿಂದ ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ಇಬ್ಬರು ಆತ್ಮೀಯರಾಗಿ ಒಬ್ಬರನ್ನು ಒಬ್ಬರು ಇಷ್ಟಪಡುತ್ತಿದ್ದರು.
ರಿಯಾಳ ಕುಟುಂಬ ಈ ಸಂಬಂಧವನ್ನು ವಿರೋಧಿಸಿದರೂ, ರಾಖಿಯ ಕುಟುಂಬ ಮತ್ತು ಹಲವಾರು ಗ್ರಾಮಸ್ಥರು ಬೆಂಬಲ ನೀಡಿದ್ದರು. ಅವರ ಸಹಾಯದಿಂದ, ಇಬ್ಬರು ಸ್ಥಳೀಯ ದೇವಾಲಯದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡು ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದ ರಿಯಾ ಬೆಳೆದಿದ್ದರು.
“ನನಗೆ ಅವಳು ಇಷ್ಟವಾದಳು, ಹಾಗಾಗಿ ನಾವು ಮದುವೆಯಾದೆವು. ನನ್ನ ಜೀವನದುದ್ದಕ್ಕೂ ನಾನು ಅವಳೊಂದಿಗೆ ಇರುತ್ತೇನೆ. ಇಲ್ಲಿ ಪ್ರೀತಿಯೇ ಮುಖ್ಯ” ಎಂದು ರಿಯಾ ಹೇಳಿದ್ದಾರೆ.
ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನುಬದ್ಧ ಮಾನ್ಯತೆ ಇಲ್ಲದಿದ್ದರೂ, ರಿಯಾ ಮತ್ತು ರಾಖಿಯಂತಹ ದಂಪತಿಗಳು ತಮ್ಮ ಸಂಬಂಧಗಳನ್ನು ಬಹಿರಂಗವಾಗಿ ಆಚರಿಸುತ್ತಲೇ ಇದ್ದಾರೆ. ಅಕ್ಟೋಬರ್ 2023 ರಲ್ಲಿ, ಸಲಿಂಗ ವಿವಾಹಕ್ಕೆ ಯಾವುದೇ ಮೂಲಭೂತ ಹಕ್ಕಿಲ್ಲ ಮತ್ತು ವಿಶೇಷ ವಿವಾಹ ಕಾಯ್ದೆ ಸಲಿಂಗ ದಂಪತಿಗಳಿಗೆ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಅದರ ಹೊರತಾಗಿಯೂ, ಇಂತಹ ಕ್ಷಣಗಳು ಲಿಂಗ ಮಿತಿಗಳನ್ನು ಮೀರಿದ ಸಂಬಂಧಗಳು ಭಾರತದಲ್ಲಿ ಹೆಚ್ಚಾಗುತ್ತಿದೆ.






