
ಪುತ್ತೂರು:ಎಸ್.ಆರ್.ಕೆ.ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರ 50ನೇ ವರ್ಷದ ಜನ್ಮದಿನದ ಅಂಗವಾಗಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ಅವರ ಅಭಿಮಾನಿ ಬಳಗದಿಂದ ನ.7ರಂದು ಸಂಸ್ಥೆ ವಠಾರದಲ್ಲಿ ನೇತ್ರದಾನ ನೋಂದಣಿ ಶಿಬಿರ ಹಾಗು ನೂತನ ಯಂತ್ರೋಪಕರಣಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ ಗಂಟೆ 9ಕ್ಕೆ ಸಂಸ್ಥೆಯ ವಠಾರದಲ್ಲಿ ನೇತ್ರದಾನ ನೋಂದಣಿ ಶಿಬಿರದ ಜೊತೆಗೆ ಅಡಿಕೆಯನ್ನು ಗೊನೆಯಿಂದ ಬಿಡಿಸುವ ಯಂತ್ರ, ಕಾಳುಮೆಣಸು ಸ್ವಚ್ಛಮಾಡುವ ಯಂತ್ರದ ಲೋಕಾರ್ಪಣೆ ನಡೆಯಲಿದೆ.ಬಳಿಕ ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಕಟ್ಟಡಕ್ಕೆ ಆವರಣ ಬೇಲಿಯ ಕೊಡುಗೆಯನ್ನು ನೀಡಲಾಗುವುದು.ಸಂಜೆ ಗಂಟೆ 6ರಿಂದ ಕೊಯಿಲ ಕಲಾಯಿಗುತ್ತು ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಯಲಿದೆ ಎಂದು ಎಸ್. ಆರ್.ಕೆ.ಪರಿವಾರದ ಸಂಘಟಕರು ತಿಳಿಸಿದ್ದಾರೆ.






