ಪುತ್ತೂರು, ನ. 08:ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ನಾಲ್ವರು ಯುವಕರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 05.11.2025ರಂದು ಸಂಜೆ ವೇಳೆ, ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಜಿ.ವಿ. ಅವರು ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭ, ಪುತ್ತೂರು ತಾಲೂಕಿನ ಕಬಕ ಗ್ರಾಮದ ಕಲ್ಲಂದಡ್ಕ ಎಂಬ ಸಾರ್ವಜನಿಕ ಪ್ರದೇಶದಲ್ಲಿ ನಾಲ್ವರು ವ್ಯಕ್ತಿಗಳು ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.

ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ನಾಲ್ವರು ವ್ಯಕ್ತಿಗಳು ಮಾದಕ ವಸ್ತು ಸೇವಿಸಿರುವ ಅನುಮಾನದ ಆಧಾರದಲ್ಲಿ ತಡೆಹಿಡಿದು ವಿಚಾರಣೆ ನಡೆಸಲಾಗಿದ್ದು, ತಾವು ಮಾದಕ ದ್ರವ್ಯ ಸೇವಿಸಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ನಿಷೇಧಿತ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 105/2025, ಕಲಂ 27(b) NDPS Act ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

🧾 ಆರೋಪಿಗಳ ವಿವರ:

1. ಮುಬಾರಕ್‌ (21 ವರ್ಷ) – ನೆಕ್ಕಿಲಾಡಿ ಗ್ರಾಮ, ಪುತ್ತೂರು


2. ಹಿತೇಶ್‌ (21 ವರ್ಷ) – ತಂದೆ: ವಾಸು ಪೂಜಾರಿ, ಬಿಳಿಯೂರು ಗ್ರಾಮ, ಬಂಟ್ವಾಳ


3. ಅಬ್ದುಲ್‌ ಅನಾಸ್‌ (21 ವರ್ಷ) – ನೆಕ್ಕಿಲಾಡಿ ಗ್ರಾಮ, ಪುತ್ತೂರು


4. ಉಮ್ಮರ್‌ ಫಾರೂಕ್‌ (41 ವರ್ಷ) – ಕಬಕ ಗ್ರಾಮ, ಪುತ್ತೂರು

ಪೊಲೀಸರು ಮಾದಕ ವಸ್ತು ಜಾಲದ ಮೇಲೆ ನಿಗಾ ಇರಿಸಿದ್ದು, ಆರೋಪಿಗಳು ಮಾದಕ ವಸ್ತು ಎಲ್ಲಿಂದ ಪಡೆದರು ಹಾಗೂ ಯಾರ ಸಂಪರ್ಕದಲ್ಲಿದ್ದರು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!