ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಭಾನುವಾರ ಮಂಗಳೂರಿನ ವಾರ್ತಾಭವನದಲ್ಲಿ ನಡೆದ ಚುನಾವಣೆಯಲ್ಲಿ ವಾರ್ತಾಭಾರತಿ ಪತ್ರಿಕೆಯ ಹಿರಿಯ ವರದಿಗಾರ ಪುಷ್ಪರಾಜ್ ಬಿ.ಎನ್. ಅವರು ನೂತನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು.

ಅವರು ತಮ್ಮ ಪ್ರತಿಸ್ಪರ್ಧಿ  ಶ್ರವಣ್ ಕುಮಾರ್ ನಾಳ ಅವರನ್ನು 43 ಮತಗಳ ಅಂತರದಿಂದ ಮಣಿಸಿ ಜಯಭೇರಿ ಬಾರಿಸಿದರು.

ರಾಜ್ಯ ಕಾರ್ಯಕಾರಿಣಿಗೆ ಶ್ರೀನಿವಾಸ ನಾಯಕ್

ಇದೇ ವೇಳೆ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹುದ್ದೆಗೆ ನಡೆದ ಚುನಾವಣೆಯಲ್ಲಿ, ಎರಡು ಬಾರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಶ್ರೀನಿವಾಸ ನಾಯಕ್ ಇಂದಾಜೆ ಅವರು ಭರ್ಜರಿ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಮುಹಮ್ಮದ್ ಅನ್ಸಾರ್ ಇನೋಳಿ ಅವರನ್ನು 80 ಮತಗಳ ಅಂತರದಿಂದ ಸೋಲಿಸಿ ರಾಜ್ಯ ಸಮಿತಿಗೆ ಆಯ್ಕೆಯಾದರು.

ನೂತನ ಪದಾಧಿಕಾರಿಗಳ ಪಟ್ಟಿ

🔹 ಉಪಾಧ್ಯಕ್ಷರು (3 ಹುದ್ದೆಗಳು):

ವಿಲ್‌ಫ್ರೆಡ್ ಡಿಸೋಜಾ (ಟಿವಿ9 – ಕ್ಯಾಮರಾಮ್ಯಾನ್)

ಮೊಹಮ್ಮದ್ ಆರೀಫ್ (ವಿಜಯ ಕರ್ನಾಟಕ)

ರಾಜೇಶ್ ಶೆಟ್ಟಿ


🔹 ಕಾರ್ಯದರ್ಶಿಗಳು (3 ಹುದ್ದೆಗಳು):

ಎ. ಸಿದ್ದಿಕ್ ನೀರಾಜೆ

ಸುರೇಶ್ ಡಿ. ಪಳ್ಳಿ

ಸತೀಶ್ ಇರಾ


🔹 ಕೋಶಾಧಿಕಾರಿ:

ವಿಜಯ ಕೋಟ್ಯಾನ್ (ವಿಜಯ ಕರ್ನಾಟಕ) – ಅವಿರೋಧ ಆಯ್ಕೆ


🔹 ಪ್ರಧಾನ ಕಾರ್ಯದರ್ಶಿ:

ರಾಜೇಶ್ ಕೆ. ಪೂಜಾರಿ (ಟಿವಿ9) – ಅವಿರೋಧ ಆಯ್ಕೆ


🔹 ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು (15 ಜನ):
ಅಶೋಕ್ ಶೆಟ್ಟಿ, ಬಿ.ಎನ್. ಸಂದೇಶ್ ಜಾರ, ಸಂದೀಪ್ ಕುಮಾರ್ ಎಂ., ಲಕ್ಷ್ಮೀನಾರಾಯಣ ರಾವ್, ಹರೀಶ್ ಮೋಟುಕಾನ, ದಿವಾಕರ ಪದ್ಮುಂಜ, ಕಿರಣ್ ಯು, ಸಿರ್ಸೀಕರ್, ಅಭಿಷೇಕ್ ಎಚ್.ಎಸ್., ಜಯಶ್ರೀ, ಭುವನೇಶ್ವರ್ ಜಿ., ಸಂದೀಪ್ ವಾಗ್ಲೆ, ಹರೀಶ್ ಕೆ. ಆದುರ್, ಗಿರೀಶ್ ಅಡ್ಡಂಗಾಯ, ಸಂದೀಪ್ ಸಾಲ್ಯಾನ್, ಆರೀಫ್ ಕಲ್ಕಟ್ಟ ಆಯ್ಕೆ ಯಾದರು

ಶೇ.93ರ ಭರ್ಜರಿ ಮತದಾನ

ಬೆಳಿಗ್ಗೆ 9 ರಿಂದ ಸಂಜೆ 3 ಗಂಟೆವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ, ಒಟ್ಟು 353 ಮತದಾರರ ಪೈಕಿ 331 ಮಂದಿ (ಶೇ.93.23) ಮತ ಚಲಾಯಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ವಾರ್ತಭವನದಲ್ಲಿ ಉತ್ಸಾಹದ ವಾತಾವರಣದಲ್ಲಿ ಮತಗಟ್ಟೆಗಳು ಕಾರ್ಯನಿರ್ವಹಿಸಿದವು.

Leave a Reply

Your email address will not be published. Required fields are marked *

Join WhatsApp Group
error: Content is protected !!