
ಪುತ್ತೂರು: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಂಪಾಡಿಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕ್ರೀಡಾಕೂಟದ 14ರ ವಯೋಮಾನದ ಬಾಲಕಿಯರ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಮುಂಡೂರು ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ತಶ್ ರೀಫಾ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಅಂಬಟ ನಿವಾಸಿಗಳಾದ ಅಬ್ದುಲ್ ಝಿಯಾದ್ ಮತ್ತು ಆತಿಕಾ ದಂಪತಿಯ ಪುತ್ರಿಯಾಗಿರುವ ತಶ್ ರೀಫಾ, ಮುಂಡೂರು ಸರ್ಕಾರಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ. ಉದ್ದ ಜಿಗಿತದಲ್ಲಿ ಉತ್ತಮ ಪ್ರದರ್ಶನ ನೀಡಿ ತಾಲೂಕು ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಈ ಸಾಧನೆಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಬಿ. ವನಿತಾ ಅವರು ವಿಶೇಷ ತರಬೇತಿ ನೀಡಿದ್ದು, ಶಾಲಾ ಶಿಕ್ಷಕ ವೃಂದದ ಸಂಪೂರ್ಣ ಸಹಕಾರ ದೊರೆತಿದೆ ಎಂದು ಶಾಲಾ ಮುಖ್ಯಗುರು ವಿಜಯ ಪಿ. ಅವರು ಮಾಹಿತಿ ನೀಡಿದ್ದಾರೆ.
ತಶ್ ರೀಫಾ ಅವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ಊರವರು ಅಭಿನಂದನೆ ಸಲ್ಲಿಸಿದ್ದಾರೆ.






