
ಕೋಡಿಂಬಾಡಿ : ಬೀಡಿ ಉದ್ಯಮಿ, ಹಿರಿಯ ಕೃಷಿಕ ಹಾಗೂ ಸ್ಥಳೀಯ ಸಮಾಜಮುಖಿ ವ್ಯಕ್ತಿತ್ವ, ಶಾಸಕರ ತಂದೆಯವರ ಆತ್ಮೀಯರಾಗಿರುವ ಮಹಮ್ಮದ್ (ಮೋನುಚ್ಚ) ಭಾರತ್ ರವರ ಮನೆಗೆ ಶಾಸಕ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಯೋಗಕ್ಷೇಮ ಬಗ್ಗೆ ಮಾತುಕತೆ ನಡೆಸಿದರು.
ಆರೋಗ್ಯದ ಕುರಿತು ಕಾಳಜಿ ವ್ಯಕ್ತಪಡಿಸಿದ ಶಾಸಕರು, ಧೈರ್ಯ ತುಂಬಿ ಶೀಘ್ರ ಚೇತರಿಕೆಗೆ ಶುಭ ಹಾರೈಸಿದರು. ಈ ಭೇಟಿ ಸಂದರ್ಭ ಕುಟುಂಬದವರೊಂದಿಗೆ ಆತ್ಮೀಯವಾಗಿ ಮಾತನಾಡಿದ್ದು, ಸ್ಥಳೀಯರ ಸಮಸ್ಯೆಗಳು ಹಾಗೂ ಗ್ರಾಮಾಭಿವೃದ್ಧಿ ವಿಚಾರಗಳ ಕುರಿತೂ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೋಡಿಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು, ಕಾರ್ಯದರ್ಶಿ ಯೋಗೀಶ ಸಾಮಾನಿ ಸಂಪಿಗೆದಡಿ–ಮಠಂತಬೆಟ್ಟು, ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ನಿರಂಜನ ರೈ ಮಠಂತಬೆಟ್ಟು, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಡುಮನೆ, ಬೂತ್ ಅಧ್ಯಕ್ಷರಾದ ಪ್ರಭಾಕರ ಸಾಮಾನಿ ಮಠಂತಬೆಟ್ಟು ಹಾಗೂ ಯತೀಶ್ ಶೆಟ್ಟಿ ಬರೆಮೇಲು ಉಪಸ್ಥಿತರಿದ್ದರು.
ಹಾಗೂ ವಿದ್ಯುತ್ ಸಲಹಾ ಸಮಿತಿಯ ಸದಸ್ಯೆ ಶ್ರೀಮತಿ ರಶ್ಮಿ ನಿರಂಜನ ರೈ ಮಠಂತಬೆಟ್ಟು, ಹಿರಿಯರಾದ ಹುಸೈನ್ ಕೆ.ಬಿ.ಕೆ, ದಾವೂದ್ ಕೋಡಿಯಾಡಿ, ಅದ್ರಾಮ ಕೋಡಿಂಬಾಡಿ, ಪ್ರಮುಖರಾದ ಸಬೀರ್ ಸರ್ಗ, ಆದಂ ಕುಂಞಿ, ಹಂಝಾ ಸೇರಿದಂತೆ ಹಲವರು ಈ ವೇಳೆ ಜೊತೆಯಲ್ಲಿದ್ದು ಆರೋಗ್ಯ ಹಾರೈಕೆಯಲ್ಲಿ ಭಾಗಿಯಾದರು.






