
ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಾನೂರು ಶ್ರೀಗುರುನಾರಾಯಣ ವೃತ್ತದ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಕುಕ್ಕೇಡಿ ನಿವಾಸಿ ಸಂಪತ್ ಕುಮಾರ್ (28) ಅವರು ದಿನಾಂಕ 10.11.2025 ರಂದು ರಾತ್ರಿ ತಮ್ಮ ಮೋಟಾರ್ ಸೈಕಲ್ (ನಂ. KA-18-J-6348) ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಬಳಿಕ ವಾಹನ ಕಳವುಗೊಂಡಿದ್ದು, ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಅ. ಮೊ. ಪ್ರಕರಣ ಸಂ. 88/2025 ಕಲಂ 303(2) ಬಿಎನ್‌ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ತನಿಖೆ ವೇಳೆ ವೇಣೂರು ನಿವಾಸಿ ಮಹಮ್ಮದ್ ಇರ್ಷಾದ್ (25) ಹಾಗೂ ಪಡಂಗಡಿ ನಿವಾಸಿ ಸಾದಿಕ್ ಖಾನ್ (26) ಅವರನ್ನು ಪೊಲೀಸರು ಬಂಧಿಸಿದ್ದು, ಕಳವಾದ ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಡಿ.ವೈ.ಎಸ್.ಪಿ ರೋಹಿಣಿ ಸಿ.ಕೆ. ಅವರ ನಿರ್ದೇಶನದಂತೆ ಹಾಗೂ ವೃತ್ತ ನಿರೀಕ್ಷಕ ಬಿ.ಜಿ. ಸುಬ್ಬಾಪೂರ ಮಠ ಅವರ ಮಾರ್ಗದರ್ಶನದಲ್ಲಿ ವೇಣೂರು ಠಾಣೆಯ ಪಿಎಸ್‌ಐ ಅಕ್ಷಯ್ ಡವಗಿ, ಪೊಲೀಸ್ ಸಿಬ್ಬಂದಿ ಓಮನ ಎನ್., ವೆಂಕಟೇಶ್ ನಾಯ್ಕ, ಕೃಷ್ಣ, ಕೇಶವತಿ, ಬಸವರಾಜ್ ಮತ್ತು ಮೋಹನ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.






