ಕರ್ನಾಟಕದಲ್ಲಿ ಪವರ್ ಫೈಟ್ ಕಾವೇರಿದೆ. ನಿನ್ನೆ ತಾನೇ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಜೊತೆ ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಮಾತುಕತೆ ನಡೆಸಿದ್ದಾರೆ.

ಆ ಚರ್ಚೆ ಬಳಿಕ ಮೊದಲ ಬಾರಿಗೆ ಮಾತಾಡಿದ ಖರ್ಗೆ ‘ನಾಯಕತ್ವ ಬದಲಾವಣೆ ವಿಷಯದಲ್ಲಿ ತುಂಬಾ ಬೇಜಾರಾಗಿದೆ’ ಎಂದು ಅಸಮಾಧಾನ ಹೊರ ಹಾಕಿದರು.

ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಎದುರು ಬಂದು ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ‘ಸಿಎಂ ಕುರ್ಚಿ ಬದಲಾವಣೆ ಹೈಕಮಾಂಡ್ನದ್ದೇ ತೀರ್ಮಾನ. ಆದರೆ, ನಾಯಕತ್ವ ಬದಲಾವಣೆ ವಿಷಯದಲ್ಲಿ ತುಂಬಾ ಬೇಜಾರಾಗಿದೆ. ನನ್ನ ಹತ್ತಿರ ಹೇಳಲು ಏನೂ ಇಲ್ಲ, ಸದ್ಯಕ್ಕೆ ನಾನು ಏನೂ ಹೇಳಲ್ಲ’ ಎಂದು ಹೇಳಿದರು.

‘ನನಗೆ ಬಹಳ ಬೇಜಾರ್ ಆಗಿದೆ. ಯಾವ ವಿಷಯ ಇಲ್ಲದೇ ನಾನು ಹೇಳಿದ್ರೆ ಚೆನ್ನಾಗಿರಲ್ಲ. ನನ್ನ ಹತ್ತಿರ ಹೇಳೋಕೆ ಏನೂ ಇಲ್ಲ. ಸಿಎಂ ಕುರ್ಚಿ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ. ರಾಜ್ಯ ನಾಯಕರು ತಲೆ ಕೆಡಿಸಿಕೊಳ್ಳುವುದು ಬೇಡ’ ಎಂದು ಖರ್ಗೆ ತಿಳಿಸಿದರು.

ರಾಹುಲ್ ಗಾಂಧಿ ಅಂಗಳಕ್ಕೆ ಕುರ್ಚಿ ಕದನದ ಚೆಂಡು!
ರಾಜ್ಯ ಕಾಂಗ್ರೆಸ್‌ನಲ್ಲಿನ ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಬಣ ಬಡಿದಾಟದಿಂದ ಬೇಸರಗೊಂಡಿರೋ ಮಲ್ಲಿಕಾರ್ಜುನ್ ಖರ್ಗೆ, ಕುರ್ಚಿ ಕದನದ ಚೆಂಡನ್ನು ರಾಹುಲ್ ಗಾಂಧಿ ಅಂಗಳಕ್ಕೆ ಎಸೆದಿದ್ದಾರೆ. ರಾಹುಲ್ ಗಾಂಧಿ ಜೊತೆ ಚರ್ಚಿಸಿದ ನಂತರವೇ ಅಂತಿಮ ನಿರ್ಧಾರ ಎಂಬರ್ಥದಲ್ಲಿ ಮಾತನಾಡಿದ್ರು. ಸದ್ಯ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದು, ಅವರು ಬಂದ ಬಳಿಕವೇ ಈ ಕಿತ್ತಾಟಕ್ಕೆ ಬ್ರೇಕ್ ಬೀಳೋ ಸಾಧ್ಯತೆ ಇದೆ ಎನ್ನಲಾಗಿದೆ.

ಖರ್ಗೆ ಮನೆಯಲ್ಲಿ ಸಿದ್ದು ಚರ್ಚೆ
ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ಖರ್ಗೆ ಜೊತೆ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ರು. ಒಂದೂವರೆ ತಾಸು ಸುದೀರ್ಘವಾಗಿ ಮಾತುಕತೆ ನಡೆಸಿದ ಸಿದ್ದು, ಕೆಲ ಶಾಸಕರ ದೆಹಲಿ ಭೇಟಿಯನ್ನು ಪ್ರಸ್ತಾಪಿಸಿ ಖರ್ಗೆ ಬಳಿ ಅಸಮಾಮಾಧಾನ ವ್ಯಕ್ತಪಡಿಸಿದ್ದಾರಂತೆ. ಈ ವೇಳೆ ಖರ್ಗೆ ಸಿಎಂಗೆ ಕೆಲವೊಂದು ಕಿವಿಮಾತು ಹೇಳಿದ್ದಾರೆ.

ಖರ್ಗೆ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚನೆ ವಿಚಾರವನ್ನು ಪ್ರಸ್ತಾಪಿಸಿ, ಪುನಾರಚಣೆಗೆ ಅವಕಾಶ ನೀಡುವಂತೆ ಮತ್ತೆ ಕೇಳಿಕೊಂಡಿದ್ದಾರಂತೆ. ನವೆಂಬರ್ 28 ರಂದು ರಾಹುಲ್ ಗಾಂಧಿ ದೆಹಲಿಗೆ ಬರಲಿದ್ದಾರೆ. ರಾಹುಲ್ ಗಾಂಧಿ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ.

ಆಂತರಿಕ ಕಚ್ಚಾಟದ ಈ ರಾಜಕೀಯ ನಾಟಕಕ್ಕೆ ತೆರೆ ಎಳೆಯಲು ಎಐಸಿಸಿ ಅಧ್ಯಕ್ಷರು ಬಂದು ರಾಜ್ಯ ನಾಯಕರ ಕೋಪವನ್ನು ತಣ್ಣಗಾಗಿಸಲು ಹೆಜ್ಜೆ ಹಾಕಿದ್ದಾರೆ. ಆದರೆ ಬಿಕ್ಕಟ್ಟನ್ನು ನಿಭಾಯಿಸಲು ಮಾರ್ಗ ಅಷ್ಟು ಸುಲಭವಾಗಿರುವಂತೆ ಕಾಣುತ್ತಿಲ್ಲ. ಖರ್ಗೆ ಮೌನ, ಡಿಕೆಶಿ ಅಸಮಾಧಾನ, ಸಿದ್ದು ಕದನ ಕಂಡ್ರೆ ನವೆಂಬರ್ನಲ್ಲೇ ಏನೋ ಬೆಳವಣಿಗೆ ಆಗಲಿದೆ ಅನ್ನೋದಂತೂ ಸತ್ಯ ಎಂದು ವಿಶ್ಲೇಷಿಸಲಾಗುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!