ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಚಿಕನ್ ಸೆಂಟರ್’ ನಲ್ಲಿ ಕೆಲಸ ಮಾಡುತ್ತಿದ್ದ ಬದ್ರುದ್ದೀನ್ ಡಿ.ಕೆ (29) ಕಾಣೆಯಾದ ಒಂದು ದಿನದ ನಂತರ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಡಿ.1ರಂದು ಬೆಳಕಿಗೆ ಬಂದಿದೆ.

ನ.30ರಿಂದ ಕಾಣೆಯಾಗಿದ್ದ ಬದ್ರುದ್ದೀನ್ ಅವರ ಶವವು ಸೇಡಿಯಾಪು ಸಮೀಪದ ಹನುಮಾಜೆಯ ಗುಡ್ಡದಲ್ಲಿ ಪತ್ತೆಯಾಗಿದೆ ಬೆಳಿಗ್ಗೆ ಪತ್ತೆಯಾದ್ದು, ಆರ್ಥಿಕ ಸಮಸ್ಯೆ ಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.

ಬದ್ರುದ್ದೀನ್ ಅವಿವಾಹಿತನಾಗಿದ್ದು, ತಾಯಿ, ಅಣ್ಣ, ಅಕ್ಕ, ತಮ್ಮ ಹಾಗೂ ತಂಗಿಯನ್ನು ಅಗಲಿದ್ದಾರೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!