ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಯ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಪಿರ್ಯಾದಿದಾರರ ಅಪ್ರಾಪ್ತ ಪ್ರಾಯದ ಮಗಳು ನವೆಂಬರ್ 4ರಂದು ಮನೆಯಲ್ಲಿ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡು, ನಂತರ ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 12ರಂದು ಆಸ್ಪತ್ರೆಯಲ್ಲಿ ಮೃತಳಾಗಿದ್ದ ಘಟನೆ ಹಿನ್ನೆಲೆಯಲ್ಲಿ ಯು.ಡಿ.ಆರ್ ಸಂಖ್ಯೆ 56/2025, ಕಲಂ 194(3)(IV) BNSS ರಂತೆ ಪ್ರಕರಣ ದಾಖಲಾಗಿತ್ತು.

ತದನಂತರ ಪ್ರಕರಣ ಮುಂದುವರಿದಂತೆ, ಮೃತ ಬಾಲಕಿಯನ್ನು ಓರ್ವ ಆರೋಪಿಯು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾನೆಂಬ ಆಕ್ಷೇಪಣೆ, ಮತ್ತೋರ್ವನೊಂದಿಗೆ ಸೇರಿ ಕಿರುಕುಳ, ಬೆದರಿಕೆ ನೀಡಿದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ದೂಡಲ್ಪಟ್ಟಿದ್ದಾಳೆಂಬ ದೂರನ್ನು ಮೃತ ಬಾಲಕಿಯ ತಾಯಿ ನವೆಂಬರ್ 28ರಂದು ಪೊಲೀಸರಿಗೆ ನೀಡಿದ್ದಾರೆ.

ಈ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ 111/2025 ಕಲಂ 74, 79, 108 ಜೊತೆಗೆ 3(5) BNS ಹಾಗೂ ಪಾಕ್ಸೋ ಕಾಯ್ದೆಯ ಕಲಂ 8ರಡಿ ದ್ವಿತೀಯ ಪ್ರಕರಣ ದಾಖಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಆರೋಪಿಗಳ ಪೈಕಿ ಪ್ರಮುಖ ಆರೋಪಿಯು ಅಪ್ರಾಪ್ತನೆಂದು ಪತ್ತೆಯಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!