
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಪ್ರಾಯದ ಬಾಲಿಕೆಯನ್ನು ಹಿಂಬಾಲಿಸಿ ತನ್ನ ಮನೆಗೆ ಕರೆದುಕೊಂಡ ಪ್ರಕರಣದಲ್ಲಿ ಆರೋಪಿ ಬಂಧಿತನಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿಯಂತೆ, ಕಳೆದ ಎರಡು ತಿಂಗಳುಗಳಿಂದ ಬಸ್ ನಿಲ್ದಾಣದಲ್ಲಿ ಬಾಲಿಕೆಯನ್ನು ಹಿಂಬಾಲಿಸುತ್ತಿದ್ದ ಮುಹಮ್ಮದ್ ಮುಸ್ತಫಾ (40) ಎಂಬಾತನು, ಕಳೆದ ನವೆಂಬರ್ 29ರಂದು ಅವಳನ್ನು ತನ್ನ ಮನೆಯೊಳಗೆ ಕರೆದಿದ್ದಾನೆಂದು ಪಿರ್ಯಾದಿ ತಿಳಿಸಿದ್ದಾರೆ. ವಿಷಯವನ್ನು ಕುಟುಂಬದವರಿಗೆ ತಿಳಿಸಿದ ನಂತರ, ದಿನಾಂಕ 02-12-2025 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 114/2025 ಕೆಸಿನಂತೆ, ಪಾಕ್‍ಸೋ ಕಾಯ್ದೆಯ ಕಲಂ 11(1)(4), 12 ಹಾಗೂ ಬಿಎನ್‌ಎಸ್ ಕಲಂ 78 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸ್ತುತ ಆರೋಪಿ ಪೊಲೀಸ್ ವಶದಲ್ಲಿದ್ದು, ವಿಚಾರಣೆ ಮುಂದುವರಿದಿದೆ. ಬಳಿಕ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.






