
ಪುತ್ತೂರು ತಾಲೂಕಿನ ಬನ್ನೂರು ನೀರ್ಪಾಜೆ ಪ್ರದೇಶದಲ್ಲಿ ಮನೆಯಂಗಳದಲ್ಲಿದ್ದ ತಾವರೆ ನೀರಿನ ಟ್ಯಾಂಕ್‌ಗೆ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮನೆಯಂಗಳದಲ್ಲಿ ಮಗುವಿಗೆ ಊಟ ಕೊಡುತ್ತಿದ್ದ ತಾಯಿ ಕೆಲ ಕ್ಷಣಗಳಿಗಾಗಿ ಮನೆಯೊಳಗೆ ತೆರಳಿ ಮರಳಿದಾಗ ಮಗು ಕಾಣೆಯಾಗಿತ್ತು. ಆತಂಕಗೊಂಡ ಮನೆಯವರು ಸುತ್ತಮುತ್ತ ಹುಡುಕಾಟ ನಡೆಸಿದಾಗ, ಮನೆಯಂಗಳದಲ್ಲಿರುವ ತಾವರೆ ನೀರಿನ ಟ್ಯಾಂಕ್‌ಗೆ ಮಗು ಬಿದ್ದಿರುವುದು ಪತ್ತೆಯಾಯಿತು.
ತಕ್ಷಣ ಮಗುವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಗಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.






