ದೊಡ್ಡಬಳ್ಳಾಪುರ ; ಸೈಟ್ ತೆಗೆದುಕೊಳ್ಳಲು ಹಣ ಸಹಾಯ ಮಾಡ್ತೀನಿ ಅಂತಾ ಮಹಿಳೆಯನ್ನು ಮಂಚಕ್ಕೆ ಕರೆದ ಆರೋಪ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮೆಳೆಕೋಟೆಯ ಬ್ರಹ್ಮಾನಂದಗುರೂಜಿ ವಿರುದ್ಧ ಕೇಳಿ ಬಂದಿದೆ.

ಹಲವು ಭಾರಿ ಆಡಿಯೋ ಕಾಲ್ ಮತ್ತು ವಿಡಿಯೋ ಕಾಲ್ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಆಡಿಯೋ ವಿಡಿಯೋ ಡಿಲೀಟ್ ಮಾಡುವಂತೆ ಮಹಿಳೆಗೆ 50 ಸಾವಿರ ಹಣ ನೀಡುವುದಾಗಿ ಆಮೀಷ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಬ್ರಹ್ಮಾನಂದಗುರೂಜಿ ಮಾತನಾಡಿರುವ ಆಡಿಯೋ ವಿಡಿಯೋ ಮಹಿಳೆಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಹಿಳೆ ಒಂಟಿಯಾಗಿ ಮನೆಯಲ್ಲಿದ್ದಾಗ ಮನೆಗೆ ಹೋಗಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ

ಇನ್ನು ಪೊಲೀಸ್ ಠಾಣೆಗೆ ಆಡಿಯೋ ವಿಡಿಯೋ ಸಮೇತ ದೂರು ನೀಡಿದರು ನ್ಯಾಯ ಸಿಗ್ತಿಲ್ಲ ಅಂತ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ನನಗೆ ಕಾಟ ಕೊಟ್ಟು ನನ್ನನ್ನೇ ಬ್ರಹ್ಮಾನಂದಗುರೂಜಿ ಮತ್ತು ಆತನ ಪತ್ನಿ ನಿಂದಿಸಿದ್ದಾರೆ. ವಿಡಿಯೋಗಳನ್ನ ತೋರಿಸಿ ನನಗೆ ನ್ಯಾಯ ಕೊಡಿಸಿ ಅಂತ ನೊಂದ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!