ಮಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಅನ್ಯ ಧರ್ಮದ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಪೋಸ್ಟ್‌ ಪ್ರಕಟಿಸಿದ ಆರೋಪದ ಮೇಲೆ ಮಂಗಳೂರು ಮೂಲದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ಟೋಬರ್‌ 11, 2025ರಂದು ಇನ್‌ಸ್ಟಾಗ್ರಾಂನ _sdpi_2025 ಐಡಿಯಿಂದ ಪ್ರಚೋದನಕಾರಿ ವಿಷಯ ಪ್ರಕಟವಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ತಾಂತ್ರಿಕ ವಿಧಾನಗಳ ಮೂಲಕ ನಡೆಸಿದಾಗ, ಈ ಪೋಸ್ಟ್‌ ಹಾಕಿದ ವ್ಯಕ್ತಿ ಮಂಗಳೂರು ಮೂಲದ, ಸದ್ಯ ಸೌದಿ ಅರೆಬಿಯಾದಲ್ಲಿದ್ದ ಅಬ್ದುಲ್ ಖಾದರ್ ನೇಹಾದ್‌ (27) ಎಂಬುದು ದೃಢಪಟ್ಟಿದೆ.

ಆರೋಪಿಯ ತಂದೆ ಮೊಹಮ್ಮದ್ ಶಬೀರ್‌. ಖಾಯಂ ವಿಳಾಸ ಕೊಟ್ನಾನ ಹೌಸ್‌, ಉಳಾಯಿಬೆಟ್ಟು, ಮಂಗಳೂರು. ಪ್ರಸ್ತುತ ವಿಳಾಸ ಸಚಿಪಮುನ್ನೂರು ಗ್ರಾಮ, ಪಾಣೆ ಮಂಗಳೂರು ಪೋಸ್ಟ್‌, ಬಂಟ್ವಾಳ ತಾಲೂಕು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ಲುಕ್‌ಔಟ್ ಸರ್ಕ್ಯುಲರ್‌ (ಎಲ್‌ಒಸಿ) ಹೊರಡಿಸಲಾಗಿತ್ತು. ಇದರಂತೆ ಡಿಸೆಂಬರ್‌ 14ರಂದು ವಿದೇಶದಿಂದ ಮರಳಿ ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅಬ್ದುಲ್ ಖಾದರ್ ನೇಹಾದ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!