ಚಿ ತ್ರದುರ್ಗದಲ್ಲಿ ನಡೆದ ಭೀಕರ ಬಸ್ ದುರಂತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ‘ಸೀ ಬರ್ಡ್’ (Seabird) ಬಸ್ ನಂಬರ್ KA-01 AE-5217 ಬೆಂಕಿಗೆ ಆಹುತಿಯಾಗಿದೆ. ಡಿಸೆಂಬರ್ 24, 2025 ರಂದು ರಾತ್ರಿ ಹೊರಟಿದ್ದ ಈ ಬಸ್‌ನಲ್ಲಿ ಒಟ್ಟು 29 ಜನ ಪ್ಯಾಸೆಂಜರ್ಸ್ (Passengers) ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.
ಸೀ ಬರ್ಡ್ ಟ್ರಾವೆಲ್ಸ್‌ನ ಚಾರ್ಟ್ (Chart) ಪ್ರಕಾರ ಆ ಬಸ್‌ನಲ್ಲಿ ಪ್ರಯಾಣ ಮಾಡ್ತಿದ್ದವರ ಹೆಸರುಗಳು ಈ ಕೆಳಗಿನಂತಿವೆ. 3 ಜನ ಬಸ್ ಸಿಬ್ಬಂದಿ ಕೂಡ ಈ ಬಸ್‌ನಲ್ಲಿದ್ರು.
ಪ್ರಯಾಣಿಕರ ಲಿಸ್ಟ್ ಇಲ್ಲಿದೆ ನೋಡಿ…
ಗಾಂಧಿನಗರದಿಂದ ಬಸ್ ಹತ್ತಿದವರು ಬೆಂಗಳೂರಿನ ಗಾಂಧಿನಗರದಲ್ಲಿರುವ ಸೀ ಬರ್ಡ್ ಲಾಂಜ್‌ನಿಂದ ರಾತ್ರಿ 8:25ಕ್ಕೆ ಬಸ್ ಹೊರಟಿದೆ. ಇಲ್ಲಿ ಒಟ್ಟು 7 ಜನ ಬಸ್ ಹತ್ತಿದ್ದಾರೆ. ಅವರ ಹೆಸರುಗಳು: ಮಂಜುನಾಥ್ (Manjunath) , ಸಂಧ್ಯಾ ಎಚ್ (Sandhya h) , ಶಶಾಂಕ್ ಎಚ್ ವಿ (Shashank hv) , ದಿಲೀಪ್ (Dilip) , ಪ್ರತೀಶ್ವರನ್ (Prethiswaran) , ಬಿಂದು ವಿ (Bindhu v) ಮತ್ತು ಕವಿತಾ ಕೆ (Kavitha k).
ಆನಂದರಾವ್ ಸರ್ಕಲ್ ಪ್ಯಾಸೆಂಜರ್ಸ್ ಬಸ್ ಮುಂದೆ ಆನಂದರಾವ್ ಸರ್ಕಲ್ ಕಡೆ ಬಂದಾಗ ಅಲ್ಲಿ ಮೂರು ಜನ ಬಸ್ ಹತ್ತಿದ್ದಾರೆ. ಅನಿರುದ್ಧ್ ಬ್ಯಾನರ್ಜಿ (Anirudh banerjee) , ಅಮೃತಾ (Amruta) ಮತ್ತು ಇಶಾ (Isha) ಇಲ್ಲಿಂದ ಜರ್ನಿ ಶುರು ಮಾಡಿದ್ರು. ಇವರೆಲ್ಲರೂ ಸ್ಲೀಪರ್ ಬಸ್‌ನ ಅಪ್ಪರ್ ಬರ್ತ್ ಬುಕ್ ಮಾಡಿದ್ರು.
ಮೆಜೆಸ್ಟಿಕ್‌ನಲ್ಲಿ ಅತಿ ಹೆಚ್ಚು ಜನ!
ಮೆಜೆಸ್ಟಿಕ್ ಪಿಕಪ್ ಪಾಯಿಂಟ್‌ನಲ್ಲಿ ಅತಿ ಹೆಚ್ಚು ಅಂದ್ರೆ 13 ಜನ ಬಸ್ ಏರಿದ್ದಾರೆ. ಸೂರಜ್ (Suraj) , ಮಾನಸ (Manasa) , ಮಿಲನ (Milana) , ಹೇಮರಾಜ್ ಕುಮಾರ್ (Hemraj kumhar) , ಕಲ್ಪನಾ ಪ್ರಜಾಪತಿ (Kalpana prajapati) , ಶಶಿಕಾಂತ್ ಎಂ (Shashikant m) , ವಿಜಯ್ ಭಂಡಾರಿ (Vijay Bhandari) , ನವ್ಯ (Navya) , ಅಭಿಷೇಕ್ (Abhishek) , ಕಿರಣ್ ಪಾಲ್ ಎಚ್ (Kiran pal h) , ಕೀರ್ತನ್ ಎಂ (Kirthan m) , ನಂದಿತಾ ಜಿ ಬಿ (Nanditha g b) ಮತ್ತು ದೇವಿಕಾ ಎಚ್ (Devika h).
ಯಶವಂತಪುರ ಮತ್ತು ಗೊರಗುಂಟೆಪಾಳ್ಯ
ಯಶವಂತಪುರದ ಗೋವರ್ಧನ್ ಥಿಯೇಟರ್ ಹತ್ರ ಮೇಘರಾಜ್ (Megharaj) , ಮಸ್ರತುನ್ನಿಸಾ ಎಸ್ ಎನ್ (Masratunnisa s n) ಮತ್ತು ಸೈಯದ್ ಜಮೀರ್ ಗೌಸ್ (Syed zameer ghouse) ಬಸ್ ಹತ್ತಿದ್ದಾರೆ. ಕೊನೆಯದಾಗಿ ಗೊರಗುಂಟೆಪಾಳ್ಯದಲ್ಲಿ ಗಗನಶ್ರೀ ಎಸ್ (Gaganashree s) , ರಶ್ಮಿ ಮಹಲೆ (Rashmi mahale) ಮತ್ತು ರಕ್ಷಿತಾ ಆರ್ (Rakshitha r) ಬಸ್ ಹತ್ತಿದ್ದಾರೆ.














