ಇ ತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಭಾರೀ ಸಂಚಲನ ಮೂಡಿಸಿದೆ. ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಜುಟ್ಟು ಹಿಡಿದು ಎಳೆದಾಡುತ್ತಾ, ಥಳಿಸುತ್ತಾ ಹಲ್ಲೆ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ವಿಚ್ಛೇದನ ಪ್ರಕರಣದಲ್ಲಿ ಜೀವನಾಂಶ (ಅಲಿಮನಿ) ನಿರಾಕರಣೆಯಿಂದ ಕೆರಳಿದ ಪತ್ನಿ, ಪತಿಯ ಜುಟ್ಟನ್ನು ಹಿಡಿದು ಎಳೆದಾಡುತ್ತಾ, ಕಪಾಳಮೋಕ್ಷ ಮಾಡಿದ್ದಾಳೆ.

ಆದರೆ ಈ ಹಲ್ಲೆಯ ನಡುವೆಯೂ ಪತಿ ಶಾಂತವಾಗಿ ನಗುತ್ತಾ ನಿಂತಿರುವುದು ನೆಟ್ಟಿಗರ ಗಮನ ಸೆಳೆದಿದೆ.

ಈ ದಂಪತಿಗಳ ವಿಚ್ಛೇದನ ಪ್ರಕರಣ ಅಂತಿಮ ಹಂತಕ್ಕೆ ಬಂದಿತ್ತು. ಪತ್ನಿ ಭಾರೀ ಮೊತ್ತದ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು. ಆದರೆ ನ್ಯಾಯಾಲಯ ಅದನ್ನು ನಿರಾಕರಿಸಿತ್ತು. ಇದರಿಂದ ಕೋಪಗೊಂಡ ಮಹಿಳೆ, ಕೋರ್ಟ್‌ನಿಂದ ಹೊರಬಂದ ತಕ್ಷಣ ಪತಿಯ ಮೇಲೆ ಹಲ್ಲೆ ಮಾಡಿದ್ದಾಳೆ. ವಿಡಿಯೋದಲ್ಲಿ ಆಕೆ ಪತಿಯ ಜುಟ್ಟು ಎಳೆದು, ಥಳಿಸುತ್ತಾ, ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ಜೀವನಾಂಶ ನಿರಾಕರಣೆಗೆ ಮುಖ್ಯ ಕಾರಣವೇನು?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ವ್ಯಕ್ತಿ ತನ್ನ ಹೆಸರಿನಲ್ಲಿ ಇದ್ದ ಎಲ್ಲಾ ಆಸ್ತಿಗಳನ್ನು ವಿಚ್ಛೇದನದ ಅಂತಿಮ ತೀರ್ಪು ಬರುವ ಮುನ್ನವೇ ತನ್ನ ತಾಯಿಯ ಹೆಸರಿಗೆ ವರ್ಗಾಯಿಸಿದ್ದಾನೆ ಎನ್ನಲಾಗಿದೆ. ಇದರಿಂದ ಕಾನೂನು ದೃಷ್ಟಿಯಲ್ಲಿ ಪತಿಯ ಬಳಿ ಯಾವುದೇ ಆಸ್ತಿ ಇಲ್ಲದಂತಾಗಿದ್ದು, ನ್ಯಾಯಾಲಯವು ಜೀವನಾಂಶ ನೀಡಲು ನಿರಾಕರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪತಿಯ ಈ ಚಾಣಾಕ್ಷತನದಿಂದ ನಿರಾಶಗೊಂಡ ಪತ್ನಿ, ಹತಾಶೆಯಿಂದ ಹಾಗೂ ಆಕ್ರೋಶದಿಂದ ಈ ರೀತಿ ವರ್ತಿಸಿದ್ದಾಳೆ ಎನ್ನಲಾಗುತ್ತಿದೆ. ಆದರೆ ಈ ಆರೋಪಗಳ ಸತ್ಯಾಸತ್ಯತೆ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.

ಇಷ್ಟೊಂದು ಹಲ್ಲೆ ನಡೆಯುತ್ತಿದ್ದರೂ ಆಕೆಯ ಪತಿ ಆಕ್ರೋಶಗೊಳ್ಳದೆ, ಶಾಂತವಾಗಿ ನಗುತ್ತಾ ನಿಂತಿದ್ದಾನೆ. ಇದು ನೆಟ್ಟಿಗರಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ‘ಇದೇ ನಿಜವಾದ ಗೆಲುವು’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!