ಪುತ್ತೂರು: ನರಿಮೊಗರು ರೈಲ್ವೇ ಮೇಲ್ಸೇತುವೆ ಮೇಲೆ ನಿರ್ಮಾಣ‌ಮಾಡಿರುವ ಅವೈಜ್ಞಾನಿಕ ಬದು(ತಡೆಗೋಡೆ) ತೆರವು ಮಾಡುವಂತೆ ಶಾಸಕ ಅಶೋಕ್ ರೈ ಅವರು ಇಲಾಖಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಶನಿವಾರ ಕಾರ್ಯಕ್ರಮದ ನಿಮಿತ್ತ ನರಿಮೊಗರಿಗೆ ತೆರಳಿದ್ದ ವೇಳೆ ಹೊಸದಾಗಿ ನಿರ್ಮಾಣವಾದ ಮೇಲ್ಸೇತುವೆ ಯ ತಿರುವಿನಲ್ಲಿ ಅವೈಜ್ಞಾನಿಕ ರೀತಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಿರುವ ಬಗ್ಗೆ ಸ್ಥಳೀಯರು ಶಾಸಕರ ಗಮನಕ್ಕೆ ತಂದಿದ್ದಾರೆ. ತಿರುವಿನಲ್ಲಿ ಈ ತಡೆ ನಿರ್ಮಾಣವಾದ ಕಾರಣ ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಸ್ಥಳೀಯರು ಶಾಸಕರಿಗೆ ದೂರು ನೀಡಿದರು. ತಕ್ಷಣ ಇಲಾಖಾ ಇಂಜಿನಿಯರ್ ಗೆ ಕರೆ ಮಾಡಿದ ಶಾಸಕರು ಪರಿಶೀಲಿಸಿ ತೆರವು ಮಾಡುವಂತೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!