ಪುತ್ತೂರು: ಯೇಸುದೇವನ ಜೀವನ ಸಂದೇಶದಂತೆ ಸಹನೆ, ಪ್ರೀತಿ ಹಾಗೂ ಸೇವಾಭಾವನೆಯೊಂದಿಗೆ ಬದುಕಿದರೆ ಜೀವನದಲ್ಲಿ ನಿಜವಾದ ನೆಮ್ಮದಿ ಮತ್ತು ಸಂತೋಷ ಲಭಿಸುತ್ತದೆ ಎಂದು ಉಪ್ಪಿನಂಗಡಿ ಬಳ್ಳಿ ಆಯುರ್ ಗ್ರಾಮ ಆಯುರ್ವೇದ ಆಸ್ಪತ್ರೆಯ ನಿರ್ದೇಶಕ ಡಾ. ಸುಪ್ರೀತ್ ಲೋಬೊ ಹೇಳಿದರು.
ಅವರು ಜನವರಿ 1ರಂದು ಪುತ್ತೂರಿನ ಬೊಳ್ವಾರ್‌ನಲ್ಲಿರುವ ಪ್ರಗತಿ ಪಾರಾಮೆಡಿಕಲ್ ಹಾಗೂ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಹೊಸ ವರ್ಷವನ್ನು ಹೊಸ ಸಂಕಲ್ಪಗಳು, ಧನಾತ್ಮಕ ಚಿಂತನೆ ಮತ್ತು ಉತ್ತಮ ಬದುಕಿನ ನಿರ್ಧಾರಗಳೊಂದಿಗೆ ಆರಂಭಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಆಸ್ಪತ್ರೆಯ ಟ್ರಸ್ಟಿ ಡಾ. ಸುಧಾ ಎಸ್. ರಾವ್ ವಹಿಸಿದ್ದರು. ಪ್ರಗತಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಶ್ರೀಮತಿ ಪ್ರೀತಾ ಹೆಗ್ಡೆ, ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಮಾನಸ, ನರ್ಸಿಂಗ್ ಸಂಸ್ಥೆಯ ಪ್ರಾಚಾರ್ಯೆ ಶ್ರೀಮತಿ ಹೇಮಲತಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾಂತಾ ಕ್ಲಾಸ್ ಹಾಗೂ ಬೊಂಬೆ ವೇಷಧಾರಿ ಮಕ್ಕಳ ಮನರಂಜನಾ ಪ್ರದರ್ಶನಗಳು ಗಮನ ಸೆಳೆದವು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದಲ್ಲಿ ದ್ವಿತೀಯ ಬಿ.ಎಸ್‌ಸಿ ವಿದ್ಯಾರ್ಥಿನಿ ಫಾತಿಮಾ ಸಫಾ ಸ್ವಾಗತಿಸಿ, ಅಲಿಮತ್ ಸಹಿಮಾ ವಂದಿಸಿದರು. ಕಮರುನ್ನಿಸ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!