ಪುತ್ತೂರು, ಜ.17: ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ಜ.24ರಂದು ನಡೆಯಲಿರುವ 33ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ–ಚೆನ್ನಯ ಜೋಡುಕರೆ ಕಂಬಳದ ಪೂರ್ವಭಾವಿ ಸಭೆಯು ಗುರುವಾರ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ರೈ ಅವರ ನೇತೃತ್ವದಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ಕಂಬಳದ ರೂಪುರೇಷೆ ಹಾಗೂ ಸಿದ್ಧತೆಗಳ ಕುರಿತು ವಿವರ ನೀಡಿದರು. ಕಂಬಳವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಸಮನ್ವಯದಿಂದ ಸಹಕರಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಪ್ರಮುಖರಾದ ಪಂಜಿಗುಡ್ಡೆ ಈಶ್ವರ ಭಟ್, ಕೃಷ್ಣಪ್ರಸಾದ ಆಳ್ವ, ರೋಶನ್ ರೈ ಬನ್ನೂರು, ನಿರಂಜನ ರೈ ಮಠಂತಬೆಟ್ಟು, ಸನತ್ ರೈ ವಲತಡ್ಕ, ವಿಕ್ರಮ್ ಶೆಟ್ಟಿ ಅಂತರ, ಶಶಿಕಿರಣ್ ಕೈಕಾರ, ನವೀನ ನಾಯಕ್ ಬೆದ್ರಾಳ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಗಂಗಾಧರ ಶೆಟ್ಟಿ ಕೈಕಾರ, ಬಿಪಿನ್ ಶೆಟ್ಟಿ ಸವಣೂರು, ಹಸೈನಾರ್ ಬನಾರಿ, ಸುಮಿತ್ ಶೆಟ್ಟಿ, ಸುಶಾಂತ ಶೆಟ್ಟಿ ಕಂಬಳಬೆಟ್ಟು, ಪ್ರೆಮಾನಂದ ನಾಯಕ್, ಗಣೇಶ ರಾಜ್ ಬೆಳಿಯೂರು, ಅಬೂಬಕರ್ ಮುಲಾರ್, ಅಭಿಷೇಕ್ ಬೆಳ್ಳಿಪ್ಪಾಡಿ, ಯೋಗೀಶ್ ಸಾಮಾನಿ, ಬಾಲಕೃಷ್ಣ ಕೊಡಿಪ್ಪಾಡಿ, ಶಶಿ ನೆಲ್ಲಿಕಟ್ಟೆ, ರಮೇಶ್ ಪೂಜಾರಿ ಬನ್ನೂರು, ಚಂದ್ರಹಾಸ ಬನ್ನೂರು, ರಾಕೇಶ್ ರೈ ಬೋಲೋಡಿ, ಜೋಕಿಮ್ ಡಿಸೋಜ, ಜಿನ್ನಪ್ಪ ಪೂಜಾರಿ, ಅಶ್ವತ್ ಕೋನಡ್ಕ, ಜಯಪ್ರಕಾಶ್ ಕೈಕಾರ, ಸಂತೋಷ್ ಗೌಡ ಸವಣೂರು, ಅರುಣ ರೆಬೆಲ್ಲೊ, ಸನಿತ್ ರೈ ಕುಂಬ್ರ, ರಾಕೇಶ್ ಕೆಮ್ಮಾರ, ಶರತ್ ಪೆರಾಜೆ, ಕಿರಣ್ ಡಿಸೋಜ, ಶಿವಪ್ರಸಾದ ರೈ ಮಠಂತಬೆಟ್ಟು, ಕಿಶನ್ ಸರೋಳಿ, ಚಂದ್ರಶೇಖರ ರೈ ಪಾಲ್ತಾಡಿ, ಉಮಾಶಂಕರ್ ನಾಯಕ್ ಪಾಂಗಳಾಯಿ, ಜಯಪ್ರಕಾಶ್ ನಾಯಕ್ ಬೈರಂಗಾಡಿ, ಕೃಷ್ಣ ನಾಯ್ಕ, ರಾಜೇಶ್ ಬನಾರಿ, ಮಂಜುನಾಥ ಗೌಡ, ಪ್ರಜನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಸುದರ್ಶನ್ ನಾಯಕ್ ಕಂಪ ಸ್ವಾಗತಿಸಿ, ದಿನೇಶ್ ಪಿ.ವಿ. ವಂದಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!