
ಪುತ್ತೂರು: ಪುಣಚ ನಿವಾಸಿ ನಿಶಿತ್ ನಾಯ್ಕ (25) ಮಂಗಳವಾರ ಮುಂಜಾನೆ ರೈಲಿನಿಂದ ಎಸೆಯಲ್ಪಟ್ಟು ಮೃತಪಟ್ಟಿರುವ ಘಟನೆ ಚೆನ್ನರಾಯಪಟ್ಟಣದ ಬಳಿ ವರದಿಯಾಗಿದೆ.
ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್‌ನಲ್ಲಿ ಉದ್ಯೋಗಿಯಾಗಿದ್ದ ನಿಶಿತ್, ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ. ಅವರು ರಾಷ್ಟ್ರಮಟ್ಟದ ಕಬಡ್ಡಿ ಆಟಗಾರನಾಗಿಯೂ ಗುರುತಿಸಿಕೊಂಡಿದ್ದರು.
ಸೋಮವಾರ ರಾತ್ರಿ ಬೆಂಗಳೂರಿನಿಂದ ಮನೆಗೆ ಬರಲು ರೈಲು ಹತ್ತಿದ್ದ ಅವರು ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದರು. ಮಂಗಳವಾರ ಮುಂಜಾನೆ ಸುಮಾರು 2.30ರ ವೇಳೆಗೆ ರೈಲಿನಿಂದ ಎಸೆಯಲ್ಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೃತದೇಹ ಹಾಸನ ರೈಲ್ವೆ ಪೊಲೀಸರ ಸುಪರ್ಧಿಯಲ್ಲಿದೆ. ಪ್ರಕರಣ ಕುರಿತು ತನಿಖೆ ಮುಂದುವರಿದಿದೆ.
ಮೃತರು ನಿವೃತ್ತ ಸೈನಿಕರಾಗಿರುವ ತಂದೆ, ತಾಯಿ ಹಾಗೂ ಸಹೋದರ ಭರತ್ ಅವರನ್ನು ಅಗಲಿದ್ದಾರೆ.







