ಗೆಳೆಯನ ಜೊತೆ ಹೋಟೆಲ್ ಗೆ ತಂಗಲು ಬಂದಿದ್ದ ಯುವತಿ ಇದ್ದಕ್ಕಿದ್ದಂತೆ ನಾಲ್ಕನೇ ಮಹಡಿಯಿಂದ ಹಾರಿದ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೆಹಲಿಯಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗಿನ ದಿನಗಳಲ್ಲಿ ಕ್ಷುಲ್ಲುಕ ಕಾರಣಕ್ಕೆ ಪ್ರೇಮಿಗಳು ಕಿತ್ತಾಡುವುದು ಜೀವವನ್ನೇ ಕಳೆದುಕೊಳ್ಳುವ ಹಂತಕ್ಕೆ ಹೋಗುವುದು ಸಾಮಾನ್ಯವಾಗಿದೆ.

ಇನ್ನೇನು ವ್ಯಾಲೆಂಟೈನ್ಸ್ ಡೇ ಹತ್ತಿರ ಬರುತ್ತಿದ್ದು ಇಂತಹ ಸಂದರ್ಭದಲ್ಲೇ ಇಂತಹ ಘಟನೆಗಳು ಕೇಳಿಬರುತ್ತಿದೆ.

ದೆಹಲಿಯ ಹೋಟೆಲ್ ಒಂದಕ್ಕೆ ಯುವತಿ ತನ್ನ ಗೆಳೆಯನ ಜೊತೆ ಬಂದಿದ್ದಳು. ಅಲ್ಲಿ ವಾಸ್ತವ್ಯವಿದ್ದ ವೇಳೆ ಇಬ್ಬರ ನಡುವೆ ಅದೇನು ಮನಸ್ತಾಪವಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತ ಯುವತಿ ನಾಲ್ಕನೇ ಮಹಡಿಯ ಕಿಟಿಕಿಯಿಂದ ಹಾರಲು ರೆಡಿಯಾಗಿದ್ದಳು.

ಇದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೂ ಆಕೆ ಕಿವಿಗೊಡದೇ ಹಾರಿಯೇ ಬಿಟ್ಟಿದ್ದಾಳೆ. ಕೆಳಕ್ಕೆ ಬಿದ್ದ ಆಕೆಯನ್ನು ತಕ್ಷಣವೇ ಎತ್ತಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯಕ್ಕೆ ಯುವತಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಆ ವೈರಲ್ ವಿಡಿಯೋ ಇಲ್ಲಿದೆ ನೋಡಿ.

Leave a Reply

Your email address will not be published. Required fields are marked *

Join WhatsApp Group
error: Content is protected !!