ಮಿಲನ್: ಇಟಲಿಯ ಮಿಲನ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದ ಕ್ರೀಡಾಗ್ರಾಮದಲ್ಲಿ ಕ್ರೀಡಾಪಟುಗಳಿಗೆ ಉಚಿತವಾಗಿ ವಿತರಿಸಲು ಸಂಗ್ರಹಿಸಿದ್ದ 10 ಸಾವಿರ ಕಾಂಡೋಮ್‌ಗಳು ಮೂರೇ ದಿನಗಳಲ್ಲಿ ಖಾಲಿಯಾಗಿರುವುದಾಗಿ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
ಒಟ್ಟು 17 ದಿನಗಳ ಕ್ರೀಡಾಕೂಟದ ಅವಧಿಗೆ ಈ ಪ್ರಮಾಣ ಸಾಕಾಗಲಿದೆ ಎಂಬ ಅಂದಾಜಿನಲ್ಲಿ ಸಂಘಟಕರು ಮೊದಲ ಹಂತದಲ್ಲಿ 10 ಸಾವಿರ ಕಾಂಡೋಮ್‌ಗಳನ್ನು ಮಾತ್ರ ಸಂಗ್ರಹಿಸಿದ್ದರು. ಆದರೆ ನಿರೀಕ್ಷೆಗಿಂತ ವೇಗವಾಗಿ ವಿತರಣೆ ಆಗಿರುವುದರಿಂದ ಸ್ಟಾಕ್ ಕೊರತೆ ಉಂಟಾಗಿದೆ ಎಂದು ಹೇಳಲಾಗಿದೆ.
ಉಳಿದ ದಿನಗಳಿಗೆ ಬೇಕಾದಷ್ಟು ಕಾಂಡೋಮ್‌ಗಳಿಗಾಗಿ ಸಂಘಟಕರು ಹೆಚ್ಚುವರಿ ಸರಬರಾಜಿಗೆ ಈಗಾಗಲೇ ಆದೇಶ ನೀಡಿದ್ದಾರೆ. ಆದರೆ ಹೊಸ ಸರಕು ಯಾವಾಗ ತಲುಪಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಇಟಲಿಯ ‘ಲಾ ಸ್ಟಾಂಪಾ’ ಪತ್ರಿಕೆ ವರದಿ ಮಾಡಿದೆ.
ಫೆ. 22ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ಸುಮಾರು 92 ದೇಶಗಳ 2,900ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!