ಮ ಧ್ಯಪ್ರದೇಶದ ಇಂದೋರ್‌’ನಲ್ಲಿ ಎಂಬಿಎ ವಿದ್ಯಾರ್ಥಿಯೊಬ್ಬ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿ, ನಂತರ ಆಕೆಯ ಆತ್ಮವನ್ನು ವಶೀಕರಣ ಮಾಡಲು ಮಾಟಮಂತ್ರಕ್ಕೆ ಮೊರೆ ಹೋದ ವಿಚಿತ್ರ ಮತ್ತು ಭೀಕರ ಘಟನೆ ನಡೆದಿದೆ.

ಪಿಯೂಷ್ ಧಮ್ನೋಡಿಯಾ ಎಂಬಾತ ತನ್ನೊಂದಿಗೆ ಸಂಬಂಧದಲ್ಲಿದ್ದ 24 ವರ್ಷದ ಎಂಬಿಎ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ್ದಾನೆ.ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.

ಆದರೆ ಕುಟುಂಬದ ಒಪ್ಪಿಗೆ ಸಿಗದ ಕಾರಣ ಯುವತಿ ಮದುವೆಗೆ ನಿರಾಕರಿಸಿದ್ದಳು. ಈ ವಿಷಯವಾಗಿ ಇಂದೋರ್ನ ದ್ವಾರಕಪುರಿಯ ಅಪಾರ್ಟ್ಮೆಂಟ್ನಲ್ಲಿ ಗಲಾಟೆ ನಡೆದು, ಆರೋಪಿಯು ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಇಂದೋರ್‌’ನ ದ್ವಾರಕಾಪುರಿ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಎಂಬಿಎ ವಿದ್ಯಾರ್ಥಿ ಪಿಯೂಷ್ ಧಮ್ನೋಟಿಯಾ ಎಂಬಾತ ತನ್ನ ಸಹಪಾಠಿ ಹಾಗೂ ಪ್ರೇಯಸಿಯನ್ನು ಅತಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.ಆರೋಪಿ ಪಿಯೂಷ್ ತನ್ನ ಪ್ರೇಯಸಿಯ ಕೈಕಾಲುಗಳನ್ನು ಕಟ್ಟಿ, ಆಕೆಯ ಎದೆಯ ಮೇಲೆ ಕುಳಿತು ಚಾಕುವಿನಿಂದ ಇರಿದಿದ್ದಾನೆ. ಇರಿತದ ರಭಸಕ್ಕೆ ಚಾಕುವೇ ಮುರಿದುಹೋಗಿದೆ ಎನ್ನಲಾಗಿದೆ.

ಲೈಂಗಿಕ ದೌರ್ಜನ್ಯ: ಕೊಲೆಯ ನಂತರ ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ನಂತರ ಶವದ ಪಕ್ಕದಲ್ಲೇ ಕುಳಿತು ಬಿಯರ್ ಕುಡಿದು ಪರಾರಿಯಾಗಿದ್ದಾನೆ.ಕೊಲೆಯ ನಂತರ ಮುಂಬೈಗೆ ಪರಾರಿಯಾಗಿದ್ದ ಈತ, ಅಲ್ಲಿನ ಹೋಟೆಲ್ಗಳಲ್ಲಿ ತಂಗಿದ್ದಾಗ ಯೂಟ್ಯೂಬ್ನಲ್ಲಿ “ಆತ್ಮಗಳನ್ನು ಕರೆಯುವುದು ಹೇಗೆ?” ಎಂದು ಸರ್ಚ್ ಮಾಡಿದ್ದಾನೆ. ಕೊಲೆ ಮಾಡಿದ್ದಕ್ಕೆ ಕ್ಷಮೆ ಕೇಳಲು ಹಾಗೂ ಆಕೆಯೊಂದಿಗೆ ಮಾತನಾಡಲು ಧೂಪ ಬೆಳಗಿ ಮಾಟಮಂತ್ರದ ಮಾದರಿಯಲ್ಲಿ ಆಕೆಯ ಆತ್ಮವನ್ನು ಕರೆಯಲು ಪ್ರಯತ್ನಿಸಿದ್ದಾನೆ.

ಕೊಲೆಗೆ ಕಾರಣ: ಪ್ರೇಯಸಿ ತನ್ನೊಂದಿಗೆ ಮಾತನಾಡದೆ ಬೇರೆ ವ್ಯಕ್ತಿಯೊಂದಿಗೆ ಚಾಟ್ ಮಾಡುತ್ತಿದ್ದಳು ಎಂಬ ಅನುಮಾನ ಮತ್ತು ಕೋಪದಿಂದ ಈ ಕೃತ್ಯ ಎಸಗಿದ್ದಾನೆ. ಫೆಬ್ರವರಿ 10 ರಂದು ಯುವತಿ ಕಾಣೆಯಾಗಿದ್ದಳು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ತನ್ನ ಈ ಎಲ್ಲಾ ವಿಲಕ್ಷಣ ಮತ್ತು ಕ್ರೂರ ಕೃತ್ಯಗಳನ್ನು ಒಪ್ಪಿಕೊಂಡಿದ್ದಾನೆ.

ವಿಚಿತ್ರ ನಡವಳಿಕೆ: ಕೊಲೆಯ ನಂತರ ಆರೋಪಿಯು ಮಹಾರಾಷ್ಟ್ರದ ಪನ್ವೇಲ್ಗೆ ಪರಾರಿಯಾಗಿದ್ದನು. ಅಲ್ಲಿನ ಖಾಸಗಿ ಹೋಟೆಲ್ನಲ್ಲಿ ತಂಗಿದ್ದ ಆತ, ಯುವತಿಯ ಆತ್ಮವನ್ನು ಮಾತನಾಡಿಸಲು ಮತ್ತು ವಶೀಕರಣ ಮಾಡಲು ಮಾಟಮಂತ್ರದ ಪ್ರಯೋಗ ಮಾಡಿದ್ದ ಎನ್ನಲಾಗಿದೆ. ಫೆಬ್ರವರಿ 11 ರಂದು ಯುವತಿ ನಾಪತ್ತೆಯಾದ ಬಗ್ಗೆ ಆಕೆಯ ತಂದೆ ದೂರು ನೀಡಿದ್ದರು. ಫೆಬ್ರವರಿ 13 ರಂದು ಯುವತಿಯ ಮೃತದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಪಿಯೂಷ್ನನ್ನು ಬಂಧಿಸಿದಾಗ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಪ್ರಸ್ತುತ ಆರೋಪಿಯನ್ನು ಪೊಲೀಸರು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!