ಪುತ್ತೂರು, ಮಾ.20: ತಾಲೂಕಿನ ಅರಿಯಡ್ಕ ಗ್ರಾಮದ ಕಟ್ಟತ್ತಾರು ಸಮೀಪದ ಗೋಳ್ತಿಲದಲ್ಲಿ ದಾಂಪತ್ಯ ಕಲಹ ದುರಂತ ಅಂತ್ಯ ಕಂಡಿದ್ದು, ಗಂಡ-ಹೆಂಡತಿಯ ನಡುವಿನ ಜಗಳದ ಮಧ್ಯೆ ಹೆಂಡತಿ ಹತ್ಯೆಯಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮೂಲತಃ ಕುಮಾರಮಂಗಲದ ಸಾವಿತ್ರಿ (42) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಆಕೆಯನ್ನು ಗಂಡ ಪುರುಷೋತ್ತಮ ಯಾನೆ ಬೈರಪ್ಪ (ಎಮೆಟ್ಟಿ ನಿವಾಸಿ) ಹತ್ಯೆಗೈದಿರುವುದಾಗಿ ತಿಳಿದುಬಂದಿದೆ.
ಘಟನೆ ಬಳಿಕ ಆರೋಪಿ ಪುರುಷೋತ್ತಮ ತನ್ನ ಕತ್ತನ್ನು ತಾನೇ ಕತ್ತಿಯಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!