ಪುತ್ತೂರು: ವಿದ್ಯುತ್ ತಂತಿ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಗಡಿಯಾರ ಎಂಬಲ್ಲಿ ನಡೆದಿದೆ.
ನೇರಳಕಟ್ಟೆ ಸಮೀಪದ ಕೊಡಾಜೆ ನಿವಾಸಿ ಶಹೀರ್ (15) ಮೃತಪಟ್ಟ ಬಾಲಕನಾಗಿದ್ದಾನೆ.
ನೇರಳಕಟ್ಟೆ ಸಮೀಪದ ಗಣೇಶನಗರದ ಪ್ಲಾಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶರೀಫ್ ಅವರ ಪುತ್ರನಾದ ಶಹೀರ್, ಶಾಲೆಗೆ ರಜೆ ಇದ್ದ ಕಾರಣ ಗಡಿಯಾರದಲ್ಲಿರುವ ತನ್ನ ಅಜ್ಜನ ಮನೆಯಲ್ಲಿ, ಆಟೋ ರಿಕ್ಷಾ ಚಾಲಕ ಹಾಗೂ ಸಮಾಜಸೇವಕ ಪುತ್ತಾಕರ್ ಅವರೊಂದಿಗೆ ಇದ್ದನು.
ಇಂದು ಬೆಳಿಗ್ಗೆ ಶಹೀರ್ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈತ ಪುತ್ತೂರು ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದನು.
ಮೃತನು ತಂದೆ, ತಾಯಿ, ಒಬ್ಬ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.














