ವಿಟ್ಲ: ಹೆಲ್ಮೆಟ್ ಧರಿಸದೇ ಸ್ಕೂಟರ್ ಚಲಾಯಿಸಿ ಬಂದ ಯುವಕನೊಬ್ಬ ಪೊಲೀಸ್ ತಪಾಸಣೆಗೆ ತಡೆದಾಗ ಉಪ ನಿರೀಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಮೇ 3ರಂದು ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ನಡೆದಿದೆ.
ಬಿ.ಎಸ್. ನಾಯಕ್ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ KA-19-HX-0497 ನಂಬರಿನ ಸ್ಕೂಟರ್‌ನಲ್ಲಿ ಬಂದ ಸವಾರನನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಆತ ಅನುಚಿತವಾಗಿ ವರ್ತಿಸಿದ ಕಾರಣ ಪೊಲೀಸರಿಗೆ ಸಂಶಯ ಉಂಟಾಯಿತು.
ವಿಚಾರಣೆ ವೇಳೆ ಆರೋಪಿ ಬಂಟ್ವಾಳ ತಾಲೂಕಿನ ಕೊಳ್ನಾಡು ನಿವಾಸಿ ಮಹಮ್ಮದ್ ಅಸ್ಬೀರ್ (26) ಎಂದು ತಿಳಿದುಬಂದಿದ್ದು, ತಾನು ಮಾದಕವಸ್ತು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿ ಮಾದಕವಸ್ತು ಸೇವನೆ ದೃಢಪಟ್ಟಿದೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ.100/2026 ಪ್ರಕರಣ ದಾಖಲಿಸಿಕೊಂಡಿದ್ದು, NDPS ಕಾಯ್ದೆಯ ಕಲಂ 27(b), BNS 221 ಹಾಗೂ KMV ನಿಯಮ 230(1) ಮತ್ತು IMV ಕಾಯ್ದೆ 177ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.














