ಕಾರ್ಕಳ: ಅನಾರೋಗ್ಯ ಗುಣಪಡಿಸುವುದಾಗಿ ನಂಬಿಸಿ ಆಯುರ್ವೇದ ಚಿಕಿತ್ಸೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ ₹12 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿರುವ ಘಟನೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಲ್ಮಣ್ ನಿವಾಸಿ ರೊನಾಲ್ಡ್ ರೋಡ್ರಿಗಸ್ (68) ವಂಚನೆಗೊಳಗಾದವರು. ಅವರ ಪತ್ನಿ ಕ್ಯಾನ್ಸರ್ ಹಾಗೂ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದು, ಮಣಿಪಾಲ ಆಸ್ಪತ್ರೆಗೆ ತೆರಳಿದ್ದ ವೇಳೆ ಸಿದ್ದಾರ್ಥ್ ಎಂಬಾತ ಪರಿಚಯವಾಗಿದ್ದನು. ತನ್ನ ತಾಯಿ ಇದೇ ರೀತಿಯ ಕಾಯಿಲೆಯಿಂದ ಗುಣಮುಖರಾಗಿದ್ದಾರೆ ಎಂದು ನಂಬಿಸಿ, ಚಿಕಿತ್ಸೆಗಾಗಿ ಮಾಧವ ಎಂಬಾತನ ಸಂಪರ್ಕ ನೀಡಿದ್ದನು.
ಆರೋಪಿಗಳ ಸೂಚನೆಯಂತೆ ರೊನಾಲ್ಡ್ ಅವರು ಗೂಗಲ್ ಪೇ ಹಾಗೂ ಚೆಕ್ ಮೂಲಕ ಹಂತ ಹಂತವಾಗಿ ಒಟ್ಟು ₹12,09,160 ಹಣ ಪಾವತಿಸಿದ್ದರು. ಬಳಿಕ ಆರೋಪಿಗಳ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದು, ನೀಡಿದ ಔಷಧಿಯಿಂದ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!