ಪುತ್ತೂರು: ಕುಂಬ್ರ ಸೆಂಟರ್ ಬಿಲ್ಡಿಂಗ್‌ನಲ್ಲಿ ನೂತನವಾಗಿ ಆರಂಭವಾಗುತ್ತಿರುವ ‘ಬ್ಲೂ ಮೂನ್ ಒನ್ ಗ್ರಾಮ್ ಗೋಲ್ಡ್ & ಫ್ಯಾನ್ಸಿ ಕಲೆಕ್ಷನ್’ ಮಳಿಗೆಯ ಉದ್ಘಾಟನಾ ಸಮಾರಂಭವು ಜುಲೈ 1ರಂದು (ಬುಧವಾರ) ನಡೆಯಲಿದೆ.ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು, ಸರಕಾರಿ ಪದವಿ ಪೂರ್ವ ಕಾಲೇಜು ಕೆಯ್ಯರಿನ ಪ್ರಾಂಶುಪಾಲೆ ಹಸಿನಾ, ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ, ಮರ್ಕಝುಲ್ ಹುದಾ ಕುಂಬ್ರ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ನ್ಯಾಯವಾದಿ ದುರ್ಗಾಪ್ರಸಾದ್ ರೈ, ಉದ್ಯಮಿ ಸಾದಿಕ್ ಹಾಜಿ ಆಕರ್ಷಣ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ, ವರ್ತಕರ ಸಂಘ ಕುಂಬ್ರದ ಅಧ್ಯಕ್ಷ ಪಿ.ಕೆ. ಮಹಮ್ಮದ್, ರಂಗಭೂಮಿ ಕಲಾವಿದ ಸುಂದರ ರೈ ಮಂದಾರ, ಹಿರಿಯರಾದ ಅಬೂಬಕ್ಕರ್ ಹಾಜಿ ಹಾಗೂ ಮೂಸಾ ಮುಸ್ಲಿಯಾರ್, ಪತ್ರಕರ್ತ ಸಿದ್ದೀಕ್ ಕುಂಬ್ರ ಮತ್ತು ಪ್ರೆಸ್ ಕ್ಲಬ್ ಸುಳ್ಯ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.







