ಪುತ್ತೂರು: ನಯಾ ಚಪ್ಪಲ್ ಬಜಾರ್, ಬುಶ್ರಾ ಟವರ್, ದರ್ಬೆ, ಪುತ್ತೂರು ಇವರ ಆಶ್ರಯದಲ್ಲಿ ವೈದ್ಯರ ದಿನಾಚರಣೆ ಹಾಗೂ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮವು ಜುಲೈ 1ರಂದು (ಬುಧವಾರ) ಬೆಳಿಗ್ಗೆ 11 ಗಂಟೆಗೆ ನಯಾ ಚಪ್ಪಲ್ ಬಜಾರ್‌ನಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ರೊ. ದತ್ತಾತ್ರೇಯ ರಾವ್ ಹಾಗೂ ರೋಟರಿ ಡಿಸ್ಟ್ರಿಕ್ಟ್ 3181ರ ಡಿಜಿಎನ್‌ಡಿ ರೊ. ಸೂರ್ಯನಾರಾಯಣ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಈ ಸಂದರ್ಭದಲ್ಲಿ ರೊ. ಡಾ. ಕೆ. ಸೀತಾರಾಮ್ ಭಟ್, ರೊ. ಡಾ. ರಾಮಕೃಷ್ಣ ರಾವ್ (ರೋಟರಿ ಕ್ಯಾಂಸ್ಕೋ ಬ್ಲಡ್ ಸೆಂಟರ್, ಪುತ್ತೂರು), ಡಾ. ನಝೀರ್ ಅಹಮ್ಮದ್ (ಡಾ. ನಝೀರ್ ಡಯಾಬಿಟಿಸ್ ಸೆಂಟರ್), ಪತ್ರಕರ್ತರಾದ ಮೇಘಾ ಪಾಲೆತ್ತಾಡಿ (ಸಂಯುಕ್ತ ಕರ್ನಾಟಕ ಹಾಗೂ ಸಂಜೆವಾಣಿ), ಸುಧಾಕರ ಸುವರ್ಣ (ವಿಜಯ ಕರ್ನಾಟಕ) ಹಾಗೂ ಸಂಶುದ್ದೀನ್ ಸಂಪ್ಯ (ವಾರ್ತಾಭಾರತಿ ಮತ್ತು ಕನ್ನಡಪ್ರಭ) ಅವರನ್ನು ಸನ್ಮಾನಿಸಲಾಗುವುದು.ಕಾರ್ಯಕ್ರಮವನ್ನು ಶ್ರೀಕಾಂತ್ ಕೊಳತ್ತಾಯ ನಿರೂಪಿಸಲಿದ್ದು, ಸಾರ್ವಜನಿಕರು ಭಾಗವಹಿಸುವಂತೆ ನಯಾ ಚಪ್ಪಲ್ ಬಜಾರ್‌ನ ಮಾಲಕರು ಹಾಗೂ ಸಿಬ್ಬಂದಿ ವರ್ಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







