ಪುತ್ತೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊಡಿಪಾಡಿ ಗ್ರಾಮದ ಪಲ್ಲತಾರ್ ಅಂಗನವಾಡಿ ಬಳಿ ಕಳೆದ 16 ವರ್ಷಗಳಿಂದ ಆರೋಗ್ಯ ರಕ್ಷಣಾಧಿಕಾರಿ (A.N.M.)ಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ತೇಜಾಕ್ಷಿ ಹರಿಶ್ಚಂದ್ರ ಅವರನ್ನು ಕಳೆಂಬಿ–ಪಲ್ಲತಾರ್ ಪರಿಸರದ ನಾಗರಿಕರ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.ಗ್ರಾಮಸ್ಥರ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಿ, ಕಷ್ಟ–ಸುಖಗಳಲ್ಲಿ ಜನರೊಂದಿಗೆ ನಿಂತು, ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆ, ನಿಷ್ಠೆ ಹಾಗೂ ಸೇವಾ ಮನೋಭಾವದಿಂದ ನಿರ್ವಹಿಸಿರುವ ತೇಜಾಕ್ಷಿ ಹರಿಶ್ಚಂದ್ರ ಅವರ 16 ವರ್ಷಗಳ ಸೇವೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು.ಬಾಲಕೃಷ್ಣ ಪೂಜಾರಿ ಪಲ್ಲತಾರ್, ಅಬ್ದುಲ್ ಲತೀಫ್ ಕಳೆಂಬಿ ಬೆಂಗಳೂರು, ಅಶ್ರಫ್ ಕಳೆಂಬಿ, ಫಾರೂಕ್ ಪಲ್ಲತಾರ್, ಲತೀಫ್ ಪಲ್ಲತಾರ್, ಇಕ್ಕು ದುಬೈ ಹಾಗೂ ಗೆಳೆಯರ ಉಸ್ತುವಾರಿಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು.ಜನರ ಸೇವೆಯೇ ನಿಜವಾದ ಗೌರವ ಎಂಬ ಸಂದೇಶದೊಂದಿಗೆ ತೇಜಾಕ್ಷಿ ಹರಿಶ್ಚಂದ್ರ ಅವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸಲಾಯಿತು.











