ಬಂಟ್ವಾಳ: ‘ನನ್ನ ಮೇಲೆ ಕೇಸ್ ಹಾಕಲು ಹೊರಟಿದ್ದಾರೆ. ಅದು ನನಗೆ ದೊಡ್ಡ ವಿಷಯವಲ್ಲ. ಈ ಕೇಸ್ ನನ್ನ ಕೂದಲಿಗೆ ಸಮ’ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಬಿ.ಸಿ.ರೋಡ್ ಚಲೋ ಪ್ರತಿಭಟನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾವು ಹತ್ಯೆಯನ್ನು ಪ್ರತಿಪಾದನೆ ಮಾಡುವುದಿಲ್ಲ. ಯಾವುದೇ ಸಂಬಂಧವಿಲ್ಲದ ಭರತ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಗಿದೆ. ಗೂಂಡಾ ಕಾಯ್ದೆಯನ್ನೂ ಹಾಕಲಾಗಿದೆ. ಇದು ಸಂವಿಧಾನ ಹೇಳಿದ ಕಾನೂನುವೇ?’ ಎಂದು ಪ್ರಶ್ನಿಸಿದರು.
‘ನನ್ನ ಮೇಲೆ ಕೇಸ್ ಹಾಕಲಿ. ನಾವು ಇದನ್ನೆಲ್ಲ ನೋಡಿಕೊಂಡು ಆಗಿದೆ. ನಾನು ಯಾರ ಬಳಿಯಾದರೂ ಫೋನ್‌ನಲ್ಲಿ ಮಾತನಾಡುತ್ತೇನೆ. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ನನಗೆ ಸ್ವಾತಂತ್ರ್ಯ ಕೊಟ್ಟಿದೆ. ಭರತ್ ಅವರೊಂದಿಗೆ ನಾನು ಫೋನ್‌ನಲ್ಲಿ ಮಾತನಾಡಿದ್ದೇನೆ. ಭರತ್ ಕುಮ್ದೇಲ್‌ಗೆ ಯಾರಿಗಾದರೂ ಹೊಡಿ ಅಥವಾ ಕೊಲ್ಲು ಎಂದು ನಾನು ಹೇಳಿದ್ದೀನಾ? ಅಂತಹ ಸಂಭಾಷಣೆ ಪೊಲೀಸರಿಗೆ ಸಿಕ್ಕಿದೆಯೇ?’ ಎಂದು ಪ್ರಶ್ನಿಸಿದರು.
‘ಪೊಲೀಸರ ಈ ರೀತಿಯ ಹುಚ್ಚು ಸ್ವಲ್ಪ ಇಳಿಯಬೇಕು’ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.











