ಪುತ್ತೂರು: ಬೆಥನಿ ಆಂಗ್ಲ ಮಾಧ್ಯಮ ಶಾಲೆ, ದರ್ಬೆ ಪುತ್ತೂರಿನ 6ನೇ ತರಗತಿ ವಿದ್ಯಾರ್ಥಿನಿ ಕು. ಭುವಿಕಾ ಆರ್.ಪಿ. ಅವರು 30 ಗಂಟೆಗಳ ಕಾಲ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಯಾಂಡ್ ಆರ್ಟ್ ಮಾಡುವ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ದಾಖಲೆ ನಿರ್ಮಿಸಿದ್ದಾರೆ.ಸೆ.26 ಮತ್ತು 27ರಂದು ಕಲ್ಲಾರೆಯ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ ದಾಖಲೆಯ ಪ್ರಯತ್ನದಲ್ಲಿ ಭುವಿಕಾ ಅವರು ಗಾಂಧಾರಿ ವಿದ್ಯೆಯೊಂದಿಗೆ ನಿರಂತರವಾಗಿ 500ಕ್ಕೂ ಅಧಿಕ ಮರಳಿನ ಚಿತ್ರಗಳನ್ನು ಬಿಡಿಸಿದ್ದಾರೆ. ಆ ಮೂಲಕ 30 ಗಂಟೆಗಳ ಸ್ಯಾಂಡ್ ಆರ್ಟ್ ವಿಭಾಗದಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.ಕೇವಲ ಆರು ತಿಂಗಳ ಅವಧಿಯಲ್ಲಿ ಗಾಂಧಾರಿ ವಿದ್ಯೆ ಹಾಗೂ ಸ್ಯಾಂಡ್ ಆರ್ಟ್ ಕಲಿತು ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.ಭುವಿಕಾ ಅವರ ಸಾಧನೆಯನ್ನು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕಿ ವಂದನೀಯ ಭಗಿನಿ ಪ್ರಶಾಂತಿ ಬಿ.ಎಸ್. ಹಾಗೂ ಪ್ರಾಂಶುಪಾಲೆ ಭಗಿನಿ ಅನಿತಾ ಟ್ರೆಸ್ಸಿ ಅವರು ಅಭಿನಂದಿಸಿ, ಪ್ರೋತ್ಸಾಹಿಸಿದರು. ಬೆಥನಿ ಶಿಕ್ಷಣ ಮಂಡಳಿಯು ಕೂಡ ಭುವಿಕಾ ಆರ್.ಪಿ. ಅವರನ್ನು ಅಭಿನಂದಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!