ಮಂಗಳೂರು, ಆ.15: ಸಿಟಿ ಸೆಂಟರ್ ಮಾಲ್‌ನ KFC ಔಟ್‌ಲೆಟ್‌ನಲ್ಲಿ ಕೊಳೆತ ಚಿಕನ್ ನೀಡಿದ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಹಲವು ತಿಂಗಳ ಹಿಂದೆ ಪ್ಯಾಕ್ ಮಾಡಿದ್ದ ಚಿಕನ್ ಹಾಗೂ ಅವಧಿ ಮೀರಿದ ಎಣ್ಣೆಯನ್ನು ಪತ್ತೆಹಚ್ಚಿದ್ದಾರೆ.ಮಾಜಿ ಮೇಯರ್ ಕವಿತಾ ಸನಿಲ್ ಅವರು ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ್ದ ಚಿಕನ್‌ನ್ನು ಅವರ 10 ವರ್ಷದ ಮಗು ತಿನ್ನುತ್ತಿದ್ದಾಗ ಕಪ್ಪಾಗಿರುವುದು ಹಾಗೂ ದುರ್ವಾಸನೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಪರಿಶೀಲನೆ ವೇಳೆ ಸ್ಟೋರೇಜ್‌ನಲ್ಲಿ ಮಾರ್ಚ್‌ನಲ್ಲಿ ಪ್ಯಾಕ್ ಮಾಡಿದ್ದ ಚಿಕನ್ ಸೇರಿದಂತೆ ಮೂರು ಮಾದರಿಯ ಮಾಂಸ ಪತ್ತೆಯಾಗಿದೆ.ಅಧಿಕಾರಿಗಳು ಚಿಕನ್ ಹಾಗೂ ಎಣ್ಣೆಯ ಮಾದರಿಗಳನ್ನು ಸಂಗ್ರಹಿಸಿ ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ KFC ಔಟ್‌ಲೆಟ್‌ನ್ನು ಬಂದ್ ಮಾಡಲಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!