ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕುಂಬ್ರ ಬ್ಲಾಕ್ ಸಮಿತಿ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಟ್ಯಾರು ಶಾಲಾ ಬಳಿ ಶನಿವಾರ ಸಂಭ್ರಮ ಹಾಗೂ ಗೌರವಪೂರ್ವಕವಾಗಿ ಆಚರಿಸಲಾಯಿತು.SDPI ಕುಂಬ್ರ ಬ್ಲಾಕ್ ಅಧ್ಯಕ್ಷ ಇರ್ಷಾದ್ ಅರಿಯಡ್ಕ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಸ್ವಾತಂತ್ರ್ಯ ದೊರೆತು ಹಲವು ವರ್ಷಗಳಾದರೂ ಯುವಜನತೆ, ರೈತರು ಹಾಗೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವುದು ವಿಪರ್ಯಾಸ ಎಂದರು. ದೇಶವನ್ನು ಫ್ಯಾಸಿಸಂನ ಕಪಿಮುಷ್ಠಿಯಿಂದ ಸ್ವಾತಂತ್ರ್ಯಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ.ಕೆ. ಸಂದೇಶ ಭಾಷಣ ಮಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿದರು. ಭಯಮುಕ್ತ ಹಾಗೂ ಹಸಿವುಮುಕ್ತ ಸ್ವಾತಂತ್ರ್ಯ ಇನ್ನೂ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿ ಸಂಟ್ಯಾರು ವಲಯದ ಮಾಯ್ ದೇ ದೇವುಸ್ ಚರ್ಚ್‌ನ ಮಾಜಿ ಗುರಿಕ್ಕಾರ ಸುನಿಲ್ ಡಿಸೋಜಾ ಮಾತನಾಡಿ, ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಎಲ್ಲರೂ ಭಾರತೀಯರು ಹಾಗೂ ಸಹೋದರರು ಎಂಬ ಮನೋಭಾವದಿಂದ ಬದುಕಬೇಕು. ಸಮಾಜದಲ್ಲಿ ವಿಷಬೀಜ ಬಿತ್ತುವ ಶಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.ಸಂತ ಫಿಲೋಮಿನಾ ಪ್ರೌಢಶಾಲೆ ಪುತ್ತೂರಿನ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಬಾಬು ಮರಿಕೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು. ಯಂಗ್ ಡೆಮೋಕ್ರಟ್ಸ್ ಮಂಗಳೂರು ಗ್ರಾಮಾಂತರ ಜಿಲ್ಲಾ ಆರ್ಗನೈಸಿಂಗ್ ಸಮಿತಿ ಸದಸ್ಯ ಹಮೀದ್ ಪುತ್ತೂರು ಮಾತನಾಡಿ, ದೇಶದ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಯುವಜನತೆ ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ ಎಂದರು.ವೇದಿಕೆಯಲ್ಲಿ ಸಂಟ್ಯಾರು ಶಾಲೆಯ SDMC ಅಧ್ಯಕ್ಷ ಉಮೇಶ್, ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ನಳಿನಿ ಮಲಾರ್, ಮಾಜಿ ಸದಸ್ಯೆ ಹಾಗೂ WIM ಪುತ್ತೂರು ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ರಶೀದಾ ರಫೀಕ್, ಬದ್ರಿಯಾ ಜುಮಾ ಮಸೀದಿ ಸಂಟ್ಯಾರು ಕಾರ್ಯದರ್ಶಿ ಹಮೀದ್ ಕಲ್ಲರ್ಪೆ, ಮುಹಿಯುದ್ದೀನ್ ಜಮಾಅತ್ ಕಮಿಟಿ ಸಂಪ್ಯ ಕಾರ್ಯದರ್ಶಿ ಅಬೂಬಕ್ಕರ್ ಕಲ್ಲರ್ಪೆ, ನಿಝಾರ್ ಸಂಪ್ಯ, ಅಝೀಝ್ ಸಂಪ್ಯ, SDPI ಕುಂಬ್ರ ಬ್ಲಾಕ್ ಉಪಾಧ್ಯಕ್ಷ ಅಶ್ರಫ್ ಸಂಟ್ಯಾರ್, ಕಾರ್ಯದರ್ಶಿ ಶಾಕಿರ್ ಕಟ್ಟತ್ತಾರ್ ಹಾಗೂ SDPI ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷ ಹನೀಫ್ ಕಲ್ಲರ್ಪೆ ಉಪಸ್ಥಿತರಿದ್ದರು.SDPI ಸಂಟ್ಯಾರು ಬ್ರಾಂಚ್ ಸಮಿತಿ ಅಧ್ಯಕ್ಷ ಝಖರಿಯಾ ಸಂಟ್ಯಾರ್ ಸ್ವಾಗತಿಸಿದರು. ಕಾರ್ಯದರ್ಶಿ ಶಾಫಿ ಮರಿಕೆ ವಂದಿಸಿದರು. ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.ಹಮೀದ್ ಪುತ್ತೂರಿಗೆ ಸನ್ಮಾನಯಂಗ್ ಡೆಮೋಕ್ರಟ್ಸ್ ಮಂಗಳೂರು ಗ್ರಾಮಾಂತರ ಜಿಲ್ಲಾ ಆರ್ಗನೈಸಿಂಗ್ ಸಮಿತಿ ಸದಸ್ಯರಾಗಿ ಆಯ್ಕೆಯಾದ ಹಮೀದ್ ಪುತ್ತೂರು ಅವರನ್ನು SDPI ಕುಂಬ್ರ ಬ್ಲಾಕ್ ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!