ಪುತ್ತೂರು: ನಗರದ ಎಲ್ಮುಡಿಯಲ್ಲಿರುವ ತಾಜ್ ಟವರ್‌ನಲ್ಲಿರುವ ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಮಳಿಗೆಯಲ್ಲಿ ಸೆ.25ರಿಂದ ಅ.10ರ ವರೆಗೆ ಆಯೋಜಿಸಿರುವ ‘ವಿಶ್ವ ವಜ್ರ–ಡೈಮಂಡ್ ಎಕ್ಸಿಬಿಷನ್’ಗೆ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಡಯಾಕೇರ್ ಸ್ಪೆಷಾಲಿಟಿ ಕ್ಲಿನಿಕ್‌ನ ವೈದ್ಯೆ ಡಾ. ಹಬೀನಾ ಪ್ರದರ್ಶನವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಜ್ರ ಅಥವಾ ಚಿನ್ನದ ಆಭರಣಗಳು ಕೇವಲ ಅಲಂಕಾರಿಕ ವಸ್ತುಗಳಲ್ಲ. ಅವು ಮಹಿಳೆಯರ ಗೌರವ ಹಾಗೂ ಭಾವನೆಗಳೊಂದಿಗೆ ನಂಟು ಹೊಂದಿವೆ. ಸುಲ್ತಾನ್ ಡೈಮಂಡ್ಸ್ ಗೋಲ್ಡ್‌ನಲ್ಲಿ ಉತ್ತಮ ಗುಣಮಟ್ಟದ ಆಭರಣಗಳ ಸಂಗ್ರಹವಿದ್ದು, ಸಿಬ್ಬಂದಿಯ ಸೇವೆಯೂ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಇಟಲಿ, ಅಮೆರಿಕಾ, ಟರ್ಕಿ, ಬೆಲ್ಜಿಯಂ, ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳ ಶೈಲಿಯ ವಜ್ರಾಭರಣಗಳನ್ನು ಅತಿಥಿಗಳು ಅನಾವರಣಗೊಳಿಸಿದರು.ಡ್ಯಾಶ್ ಮಾರ್ಕೆಟಿಂಗ್ ಕಂಪೆನಿಯ ಎಂ.ಡಿ. ನಳಿನಿ ಪಿ. ಶೆಟ್ಟಿ ಮಾತನಾಡಿ, ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಗ್ರಾಹಕರ ವಿಶ್ವಾಸ ಗಳಿಸಿರುವ ಮಳಿಗೆಯಾಗಿದೆ. ಗ್ರಾಹಕರು ಸಂಸ್ಥೆಗೆ ಇನ್ನಷ್ಟು ಬೆಂಬಲ ನೀಡುವ ಮೂಲಕ ಬೆಳವಣಿಗೆಗೆ ಸಹಕರಿಸಬೇಕು ಎಂದು ಶುಭ ಹಾರೈಸಿದರು.ಫ್ಯಾಷನ್ ಡಿಸೈನರ್ ಶ್ರಾವ್ಯ ಜಗದೀಶ್ ಶೆಟ್ಟಿ, ಲಿಲ್ಲಿ ಎವಲಿನ್ ಡಿಸೋಜಾ, ವಿಲ್ಮಾ ಪ್ರಿಯಾಂಕ ಡಿಸೋಜಾ ಹಾಗೂ ಆರ್ಲಪದವು ಸೌಂದರ್ಯ ಹರ್ಬಲ್ ಬ್ಯೂಟಿಪಾರ್ಲರ್‌ನ ದೀಕ್ಷಾ ರೈ ಮಾತನಾಡಿ, ಮಳಿಗೆಯಲ್ಲಿರುವ ವೈವಿಧ್ಯಮಯ ವಜ್ರಾಭರಣಗಳ ಸಂಗ್ರಹ ಹಾಗೂ ಸಿಬ್ಬಂದಿಯ ಸೇವೆಯನ್ನು ಪ್ರಶಂಸಿಸಿದರು.ವಿದೇಶಿ ಶೈಲಿಯ ವಜ್ರಾಭರಣಗಳ ಬೃಹತ್ ಸಂಗ್ರಹಇಟಲಿ, ಫ್ರಾನ್ಸ್, ಅಮೆರಿಕಾ, ಬೆಲ್ಜಿಯಂ, ಸಿಂಗಾಪುರ, ಟರ್ಕಿ ಹಾಗೂ ಮಧ್ಯಪ್ರಾಚ್ಯ ಶೈಲಿಯ ನೈಸರ್ಗಿಕ ವಜ್ರಾಭರಣಗಳ ಬೃಹತ್ ಸಂಗ್ರಹವನ್ನು ಪ್ರದರ್ಶನದಲ್ಲಿ ಪರಿಚಯಿಸಲಾಗಿದೆ. ಅ.10ರ ವರೆಗೆ ನಡೆಯುವ ಎಕ್ಸಿಬಿಷನ್‌ನಲ್ಲಿ 20% ವರೆಗೆ ರಿಯಾಯಿತಿ ನೀಡಲಾಗುತ್ತಿದ್ದು, ಗ್ರಾಹಕರಿಗೆ ವಿವಿಧ ವಿನ್ಯಾಸಗಳ ವಜ್ರಾಭರಣಗಳನ್ನು ಖರೀದಿಸಲು ಅವಕಾಶವಿದೆ.ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ರವಾಹತ್ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು. ನವ್ಯ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!