ಪುತ್ತೂರು: ನಗರದ ಮುಖ್ಯ ರಸ್ತೆಯಲ್ಲಿರುವ ಕೃಷ್ಣ ಪ್ರಸಾದ್ ಬಿಲ್ಡಿಂಗ್‌ನ 2ನೇ ಮಹಡಿಯಲ್ಲಿ ಆರಂಭವಾಗುತ್ತಿರುವ ‘ಸ್ವಾತಿ ಆಕೃತಿ ವೆಲ್‌ನೆಸ್’ ಕೇಂದ್ರದ ಭವ್ಯ ಉದ್ಘಾಟನಾ ಸಮಾರಂಭವು ಜುಲೈ 13ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಮಾಲಕಿ ಸ್ವಾತಿ ಬಿ. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಆರೋಗ್ಯಕರ ಜೀವನಶೈಲಿ, ಯೋಗ ಹಾಗೂ ಸಮಗ್ರ ಆರೋಗ್ಯ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಈ ವೆಲ್‌ನೆಸ್ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಕೃಷ್ಣ ಪ್ರಸಾದ್ ಬಿಲ್ಡಿಂಗ್‌ನ 2ನೇ ಮಹಡಿಯಲ್ಲಿ (ಅರುಣ ಕಲಾ ಮಂದಿರದ ಎದುರು, ಕೆನರಾ ಬ್ಯಾಂಕ್ ಮೇಲ್ಭಾಗ) ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.ಯೋಗ, ಆರೋಗ್ಯ ಹಾಗೂ ವೆಲ್‌ನೆಸ್‌ಗೆ ಸಂಬಂಧಿಸಿದ ಸಮಗ್ರ ಸೇವೆಗಳನ್ನು ಗುಣಮಟ್ಟದ ರೀತಿಯಲ್ಲಿ ಜನರಿಗೆ ಒದಗಿಸುವುದು ಕೇಂದ್ರದ ಪ್ರಮುಖ ಉದ್ದೇಶವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವ ವಿವಿಧ ಯೋಗ ತರಗತಿಗಳು, ಆರೋಗ್ಯ ಮಾರ್ಗದರ್ಶನ ಹಾಗೂ ವೆಲ್‌ನೆಸ್ ಸೇವೆಗಳು ಇಲ್ಲಿ ಲಭ್ಯವಿರಲಿವೆ ಎಂದು ಸ್ವಾತಿ ಬಿ. ಶೆಟ್ಟಿ ತಿಳಿಸಿದರು.ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮುಳಿಯ ಗ್ರೂಪ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ನಿರ್ದೇಶಕಿ ಅಶ್ವಿನಿ ಕೃಷ್ಣ ನಾರಾಯಣ ಮುಳಿಯ, ವೈದ್ಯಾರ್ಸ್ ಆಯುರ್ವೇದ ಆಸ್ಪತ್ರೆಯ ಪ್ರೊಪ್ರೈಟರ್ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಜೈನ್, ಎಸ್‌ಜಿಕೆ ಫರ್ನಿಚರ್‌ನ ಕೆ. ಕೃಷ್ಣ ಕಾಮತ್ ಹಾಗೂ ಉದ್ಯಮಿ ಉಮೇಶ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಪ್ರಗತಿ ಆಸ್ಪತ್ರೆಯ ಡಾ. ಅನನ್ಯ ಲಕ್ಷ್ಮೀ ಹಾಗೂ ಕ್ಷತ್ರಿಯ ಸೌಹಾರ್ದ ಸಹಕಾರಿ ನಿಯಮಿತ, ಪುತ್ತೂರು ಅಧ್ಯಕ್ಷ ಉಮೇಶ್ ಕೆ. ಉಪಸ್ಥಿತರಿದ್ದರು.







