ಪುತ್ತೂರು: ವೈದ್ಯಕೀಯ ತಜ್ಞ ಡಾ. ನಝೀರ್ ಅಹಮದ್, ರೋಟರಿ ಕ್ಲಬ್ ಪುತ್ತೂರು ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವರ ಆಶ್ರಯದಲ್ಲಿ ಮಾಸಿಕ ಆರೋಗ್ಯ ತಪಾಸಣಾ ಶಿಬಿರವು ಜುಲೈ 9ರಂದು (ಗುರುವಾರ) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಕಲ್ಲಾರೆಯ ಕೃಷ್ಣ ಆರ್ಕೆಡ್‌ನಲ್ಲಿರುವ ಡಾ. ನಝೀರ್ ಅಹಮದ್ ಅವರ ಕ್ಲಿನಿಕ್‌ನಲ್ಲಿ ನಡೆಯಲಿದೆ.ಶಿಬಿರದಲ್ಲಿ ಉಚಿತವಾಗಿ ಥೈರಾಯ್ಡ್ (TSH), ರಕ್ತದ ಸಕ್ಕರೆ (ಶುಗರ್), HBA1C ಹಾಗೂ ಮೂಳೆ ಸಾಂದ್ರತೆ (BMD) ಪರೀಕ್ಷೆಗಳನ್ನು ನಡೆಸಲಾಗುವುದು. ಜೊತೆಗೆ, ಕೊಲೆಸ್ಟರಾಲ್ ಪರೀಕ್ಷೆಯನ್ನು ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 94814 51929 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!